ವಿಜಯವಾಡ, ಆಂಧ್ರಪ್ರದೇಶ:ಡಾ. ಬಿ.ಆರ್. ಅಂಬೇಡ್ಕರ್ ಕೋಣಸೀಮ ಜಿಲ್ಲೆಯ ಶಿವಕೋಡು ಎಂಬಲ್ಲಿ ಬೋರ್‌ವೆಲ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಅದನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಈ ಬೆಂಕಿ ಕಾಣಿಸಿಕೊಳ್ಳಲು ಗ್ಯಾಸ್ ಪೈಪ್‌ಲೈನ್ ಸೋರಿಕೆ ಕಾರಣವಲ್ಲ. ಅಲ್ಲಿ ನಿಜವಾದ ಪೈಪ್‌ಲೈನ್ ಇಲ್ಲವೇ ಇಲ್ಲ ಎಂದು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ಮಾಹಿತಿ ನೀಡಿದೆ. ಭೂಮಿಯ ಪದರಗಳಲ್ಲಿ ಅನಿಲ ಮತ್ತು ನೀರಿನಿಂದ ಈ ಬೆಂಕಿ ಕಾಣಿಸಿಕೊಂಡಿರಬಹುದು. ಗುಂಡಿಯನ್ನು ಆಳವಾಗಿ ಅಗೆದಿದ್ದರಿಂದ ಈ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜು ಮಾಡಿರುವ ಸಿಬ್ಬಂದಿ, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಆದರೆ, ಭೂಮಿಯ ಆಳದಲ್ಲಿ ಹಾದು ಹೋಗಿರುವ ಗ್ಯಾಸ್ ಪೈಪ್‌ಲೈನ್ ಸೋರಿಕೆಯಿಂದ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಶನಿವಾರ ಬೆಳಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ಹಾಗೂ ಅಗ್ನಿಶಾಮಕ ಸಿಬ್ಬಂದಿ ಆ ಬೆಂಕಿ ನಂದಿಯನ್ನು ನಂದಿಸಿದ್ದಾರೆ. ಆದರೆ, ಇದು ಗ್ಯಾಸ್ ಪೈಪ್‌ಲೈನ್ ಸೋರಿಕೆಯಿಂದ ಆದ ಪ್ರಮಾದವಲ್ಲ. ಕಾರಣ ಇಲ್ಲಿ ಯಾವುದೇ ಗ್ಯಾಸ್ ಪೈಪ್‌ಲೈನ್ ಹೋಗಿಲ್ಲ. ಬೋರ್‌ವೆಲ್‌ನಿಂದಲೇ ಹೊರಬರುತ್ತಿರುವ ಗ್ಯಾಸ್ ಆಗಿದೆ ಎಂದು ತಿಳಿಸಿದ್ದಾರೆ.
ರೈತರೊಬ್ಬರು ಶುಕ್ರವಾರ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದು ಅದೇ ಜಾಗದಲ್ಲಿ ಒಎನ್‌ಜಿಸಿ ಪೈಪ್‌ಲೈನ್ ಹಾದು ಹೋಗಿದೆ. ಕೊಳವೆ ಬಾವಿ ಕೊರೆಸುವಾಗ ಗ್ಯಾಸ್ ಪೈಪ್ ಲೈನ್ ಸೋರಿಕೆಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಅಚ್ಚರಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ತಲುಪಿಸಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ಸಿಬ್ಬಂದಿ, ಹಲವು ಗಂಟೆಗಳ ಪ್ರಯತ್ನದ ಬಳಿಕ ಭೂಮಿಯಿಂದ 20 ಅಡಿ ಎತ್ತರಕ್ಕೆ ಚಿಮ್ಮಿ ಬರುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಸ್ಥಳೀಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.