ಕರ್ನಾಟಕ

karnataka

ETV Bharat / bharat

500 ರೂಪಾಯಿಗೆ ಸಿಲಿಂಡರ್​.. ಜನತೆಗೆ ಸಿಹಿ ಸುದ್ದಿ ನೀಡಿದ್ರು ಮುಖ್ಯಮಂತ್ರಿ ಗೆಹ್ಲೋಟ್​ - ಈಟಿವಿ ಭಾರತ ಕನ್ನಡ

ಈಗ ಗ್ಯಾಸ್​ ಸಿಲಿಂಡರ್​​ ವಿಷಯದಲ್ಲಿ ಪರಿಹಾರವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್​ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಈ ವೇಳೆ ಹೇಳಿದರು.

CM Gehlot
ಸಿಎಂ ಅಶೋಕ್ ಗೆಹ್ಲೋಟ್

By

Published : Dec 19, 2022, 7:15 PM IST

ಆಲ್ವಾರ್(ರಾಜಸ್ಥಾನ): ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ವೇಳೆ ಆಲ್ವಾರ್​ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​​ನ್ನು ರೂ.500ಗೆ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜನತೆಗೂ ಈಗಿರುವ 1050 ರೂಪಾಯಿಯ ಗ್ಯಾಸ್​ ಸಿಲಿಂಡರ್​ನ್ನು ರೂ.500 ಗೆ ನೀಡಲಿದ್ದೇವೆ. ಈ ಯೋಜನೆ ಬರುವ ಏಪ್ರಿಲ್​ನಿಂದಲೇ ಜಾರಿಯಾಗಲಿದ್ದು, ರಾಜ್ಯದ ಎಲ್ಲಾ ಪ್ರಜೆಗಳಿಗೂ ಲಭ್ಯವಾಗಲಿದೆ. ಅಲ್ಲದೇ ಮುಂದಿನ ತಿಂಗಳು ಬಜೆಟ್​ ಮಂಡಿಸಲಿದ್ದು, ಅದರಲ್ಲಿ ಹಣದುಬ್ಬರ ತಗ್ಗಿಸಲು ಕಿಚನ್​ ಕಿಟ್​ ವಿತರಿಸುವ ಯೋಜನೆಯನ್ನು ತರಲಿದ್ದೇವೆ ಎಂದರು.

ಜನರು ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದು, ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಇದೆಲ್ಲವನ್ನೂ ನಾವು ಗಮನಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲ. ಅಲ್ಲದೇ ನಮ್ಮ ದೇಶದ ಸಂವಿಧಾನವನ್ನೇ ಕಡೆಗಣಿಸುವ ಕೆಲಸವನ್ನು ಮಾಡುತ್ತಿದೆ. ಪ್ರಧಾನಿ ಮೋದಿಯವರು ಜನತೆಗೆ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಅವರು ಅದೆಲ್ಲವನ್ನೂ ಮರೆತಿದ್ದಾರೆ ಈ ವೇಳೆ ಆರೋಪಿಸಿದರು.

ಈಗ ಗ್ಯಾಸ್​ ಸಿಲಿಂಡರ್​​ ವಿಷಯದಲ್ಲಿ ಪರಿಹಾರವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್​ ಸಮಸ್ಯೆಯನ್ನು ಪರಿಹರಿಸುತ್ತೇವೆ. ಅಲ್ಲದೇ ಈಗಾಗಲೇ ಕೆಲವೊಂದು ಯೋಜನೆಯನ್ನು ಜಾರಿಗೆ ತರಲು ನಿರ್ಣಯ ಕೈಗೊಂಡಿದ್ದೇವೆ. ಜನರಿಗೆ ಕಷ್ಟ ಆಗುವುದನ್ನು ನಾವೆಂದು ಸಹಿಸುವುದಿಲ್ಲ. ನಾವೆಂದಿಗೂ ನಿಮ್ಮ ಪರ ಇದ್ದೇವೆ. ಮುಂಬರುವ ಬಜೆಟ್​ನ್ನು ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದ್ದು, ಅವರಿಗಾಗಿಯೇ ಸಾಕಷ್ಟು ವಿಶೇಷತೆಗಳು ಇರಲಿವೆ. ಅಲ್ಲದೇ ರಾಜ್ಯದ ಜನತೆಗೂ ಗುಡ್​ ನ್ಯೂಸ್​ ನೀಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:5 ಆರ್ಥಿಕ ವರ್ಷಗಳಲ್ಲಿ 10 ಲಕ್ಷ ಕೋಟಿ ಸಾಲ ರೈಟ್ ಆಫ್.. ಸಚಿವೆ ನಿರ್ಮಲಾ ಸೀತಾರಾಮನ್

ABOUT THE AUTHOR

...view details