ಕರ್ನಾಟಕ

karnataka

ETV Bharat / bharat

ದರೋಡೆಕೋರ-ಭಯೋತ್ಪಾದಕರ ನಂಟು: ದೇಶದ ವಿವಿಧೆಡೆ ಎನ್ಐಎ ದಾಳಿ

ದರೋಡೆಕೋರ-ಭಯೋತ್ಪಾದಕರ ಜಾಲ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಿಗ್ಗೆಯಿಂದ ದೇಶದ ವಿವಿಧೆಡೆ ದಾಳಿ ನಡೆಸುತ್ತಿದೆ.

NIA conducts multi state raids
ದೇಶದ ವಿವಿಧೆಡೆ ಎನ್ಐಎ ದಾಳಿ

By

Published : Nov 29, 2022, 10:53 AM IST

ನವ ದೆಹಲಿ:ದರೋಡೆಕೋರರು ಮತ್ತು ಭಯೋತ್ಪಾದಕರ ನಡುವಿನ ನಂಟಿನ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬೆಳಗ್ಗೆ ಉತ್ತರ ಪ್ರದೇಶ, ಪಂಜಾಬ್, ದೆಹಲಿ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಹಲವೆಡೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಲಾರೆನ್ಸ್ ಬಿಷ್ಣೋಯ್, ನವೀನ್ ದಬಾಸ್ ಮತ್ತು ಸುನಿಲ್ ಬಲಿಯಾನ್ ಅಲಿಯಾಸ್ ಟಿಲ್ಲು ತಾಜ್ಪುರಿಯಾ ಎಂಬ ಮೂರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡಿದ್ದ ಎನ್‌ಐಎ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಕೂಡ ಕಾರ್ಯಾಚರಣೆ ನಡೆಸಿದೆ. ಕಳೆದ ತಿಂಗಳು ಕೂಡಾ ರಾಷ್ಟ್ರೀಯ ತನಿಖಾ ಸಂಸ್ಥೆ ಇದೇ ರೀತಿಯ ಶೋಧ ನಡೆಸಿತ್ತು.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇತರ ರಾಜ್ಯಗಳಲ್ಲಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿ ದರೋಡೆಕೋರರಿಗೆ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರೊಂದಿಗಿನ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆದಿತ್ತು. ರಾಜಸ್ಥಾನದ ಚುರು ಎಂಬಲ್ಲಿನ ಸಂಪತ್ ನೆಹ್ರಾ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ ಬಗ್ಗೆ ವರದಿಯಾಗಿದೆ.

ಪಂಜಾಬ್‌ನಲ್ಲಿ, ವಕೀಲ ಗುರುಪ್ರೀತ್ ಸಿಂಗ್ ಸಿಧು, ಕಬಡ್ಡಿ ಪ್ರವರ್ತಕ ಜಗ್ಗಾ ಜಾಂಡಿಯನ್ ಮತ್ತು ಆರೋಪಿತ ದರೋಡೆಕೋರ ಜಮನ್ ಸಿಂಗ್ ಅವರ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಭಯೋತ್ಪಾದಕ ಜಾಲ ಮತ್ತು ಅವುಗಳಿಗೆ ಧನಸಹಾಯ ಮತ್ತು ಮೂಲಸೌಕರ್ಯಗಳನ್ನು ಒದಗಿಸುತ್ತಿರುವವರನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ, ಉತ್ತರ ಭಾರತದ ನಾಲ್ಕು ರಾಜ್ಯಗಳು ಮತ್ತು ದೆಹಲಿಯಾದ್ಯಂತ 52 ಸ್ಥಳಗಳಲ್ಲಿ ಎನ್‌ಐಎ ಶೋಧಿಸಿ ವಕೀಲರ ಮತ್ತು ಹರಿಯಾಣದ ದರೋಡೆಕೋರನನ್ನು ಬಂಧಿಸಿತ್ತು. ಬಂಧಿತ ವಕೀಲರನ್ನು ಈಶಾನ್ಯ ದೆಹಲಿಯ ಉಸ್ಮಾನ್‌ಪುರ ಪ್ರದೇಶದ ಗೌತಮ್ ವಿಹಾರ್ ನಿವಾಸಿ ಆಸಿಫ್ ಖಾನ್ ಎಂದು ಗುರುತಿಸಲಾಗಿದೆ. ಅವರ ನಿವಾಸದಲ್ಲಿ ನಡೆಸಿದ ಶೋಧದ ಸಮಯದಲ್ಲಿ ನಾಲ್ಕು ಶಸ್ತ್ರಾಸ್ತ್ರಗಳು ಮತ್ತು ಕೆಲವು ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಆಸಿಫ್ ಜೈಲಿನಲ್ಲಿರುವ ದರೋಡೆಕೋರರ ಜತೆ ಸಂಪರ್ಕದಲ್ಲಿದ್ದುದು ಬಹಿರಂಗವಾಗಿದೆ ಎಂದು ಎನ್​ಐಎ ತಿಳಿಸಿದೆ.

ಇದನ್ನೂ ಓದಿ:ಪಿಎಫ್​ಐ ಪ್ರಕರಣ, ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ

ABOUT THE AUTHOR

...view details