ಫರೀದ್ಕೋಟ್ (ಪಂಜಾಬ್) :ಬಂಬಿಹಾ ಗುಂಪಿಗೆ ಸೇರಿದ ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಅಲಿಯಾಸ್ ಬಿಲ್ಲಾ ಫರೀದ್‌ಕೋಟ್‌ನ ಆಸ್ಪತ್ರೆಯಿಂದ ಪೊಲೀಸರಿಗೆ ಸುಳಿವು ನೀಡದೆ ಪರಾರಿಯಾಗಿದ್ದಾನೆ. ಉದ್ಯಮಿಗಳಿಗೆ ಬೆದರಿಕೆ ಹಾಕಿ, ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎನ್‌ಕೌಂಟರ್ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಪೊಲೀಸ್ ಎನ್ಕೌಂಟರ್ನಿಂದ ಗಾಯಗೊಂಡಿದ್ದ ಬಂಧಿತ ಗ್ಯಾಂಗ್‌ಸ್ಟರ್ ಬಿಲ್ಲಾ, ಬಿಗಿ ಭದ್ರತೆಯ ನಡುವೆಯೂ ಫರೀದ್‌ಕೋಟ್‌ನ ಜಿಜಿಎಸ್ ವೈದ್ಯಕೀಯ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಈತ ಬಾಂಬಿಹಾ ಗುಂಪಿನ ಸದಸ್ಯ. ಜುಲೈ 11 ರಂದು ಫರೀದ್‌ಕೋಟ್ ಪೊಲೀಸರು ಎನ್‌ಕೌಂಟರ್ ನಡೆಸಿ ಬಾಂಬಿಹಾ ಗುಂಪಿನ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದರು. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಜಿಜಿಎಸ್ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆರೋಪಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ :ಯುಪಿಯಲ್ಲೀಗ ಗ್ಯಾಂಗ್‌ಸ್ಟರ್, ಮಾಫಿಯಾಗಳು ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಲು ಸಾಧ್ಯವಿಲ್ಲ- ಸಿಎಂ ಯೋಗಿ