ಅಮೃತಸರ(ಪಂಜಾಬ್):ಸಾಮಾಜಿಕ ಜಾಲಾತಾಣ ಈಗ ಹೆಚ್ಚು ಜನರು ಬಳಸುವ ಸಾಧನವಾಗಿದೆ. ಫೇಸ್ ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಗಳನ್ನು ಬಳಸದವರೇ ಇಲ್ಲ ಎಂಬ ಸ್ಥಿತಿ ತಲುಪಿದೆ. ಸಾಮಾಜಿಕ ಮಾಧ್ಯಮದಲ್ಲಿ ಉದ್ಯೋಗ ಪಡೆಯುವ ಅವಕಾಶವೂ ಇದೆ. ಆದರೆ ಪಂಜಾಬ್ನಲ್ಲಿ ರೌಡಿಸಂ ಗ್ಯಾಂಗ್ಗೆ ಸೇರಲು ಇಚ್ಚಿಸುವವರಿಗೆ ವಾಟ್ಸ್ಆ್ಯಪ್ ಸಂಖ್ಯೆ ನೀಡಿ ಹಾಕಿರುವ ಫೇಸ್‌ಬುಕ್ ಫೋಸ್ಟರ್ ಹರಿದಾಡುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ರೌಡಿಂಗೂ ಸೇರುವ ಅವಕಾಶ ತೆರೆಯಲಾಗಿದೆ.
ಪಂಜಾಬ್ನಲ್ಲಿ ಆ್ಯಕ್ಟೀವ್ ಆಗಿರುವ ಬಾಂಬಿಹಾ ಗ್ಯಾಂಗ್ಫೇಸ್ ಬುಕ್ನಲ್ಲಿ ಫೋಸ್ಟರ್ ರಿಲೀಸ್ ಮಾಡಿದ್ದು, ಗ್ಯಾಂಗ್ ಸೇರಲಿಚ್ಚಿಸುವವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸುವಂತೆ ತಿಳಿಸಲಾಗಿದೆ. ಈ ಬಗ್ಗೆ ನೆಟ್ಟಿಗರು ಟೀಕೆ ಮಾಡಿದ್ದು, ಆಮ್ ಆದ್ಮಿ ಪಕ್ಷದ ಆಡಳಿತದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪಂಜಾಬ್ ಪೊಲೀಸರು ಹೂಗ್ಲಿಸಂ ಅನ್ನು ತೊಡೆದು ಹಾಕುವ ಬಗ್ಗೆ ಹೇಳುತ್ತಿದ್ದಾರೆ. ಆದರೆ, ಯಾವುದೇ ತೀಕ್ಷ್ಣ ಕ್ರಮಗಳು ಕಾಣಿಸುತ್ತಿಲ್ಲ.