ಕರ್ನಾಟಕ

karnataka

ETV Bharat / bharat

ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ ಸೋದರ ಮಾವ ಸಲೀಂ ಫ್ರೂಟ್‌ ಬಂಧಿಸಿದ ಎನ್​ಐಎ - ಮಹಾರಾಷ್ಟ್ರದಲ್ಲಿ ಸಲೀಂ ಫ್ರೂಟ್‌ ಬಂಧನ

ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಫ್ರೂಟ್‌ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

Salim Fruit arrested by NIA  National Investigation Agency  Salim Fruit arrested in Maharashtra  underworld don Dawood Ibrahim  gangster Chhota Shakeel  ಸಲೀಂ ಫ್ರೂಟ್‌ನನ್ನು ಬಂಧಿಸಿದ ಎನ್​ಐಎ  ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌  ಭೂಗತ ಪಾತಕಿ ದಾವೂದ್ ಇಬ್ರಾಹಿಂ  ಮಹಾರಾಷ್ಟ್ರದಲ್ಲಿ ಸಲೀಂ ಫ್ರೂಟ್‌ ಬಂಧನ  ರಾಷ್ಟ್ರೀಯ ತನಿಖಾ ದಳ
ಸಲೀಂ ಫ್ರೂಟ್‌ನನ್ನು ಬಂಧಿಸಿದ ಎನ್​ಐಎ

By

Published : Aug 5, 2022, 12:23 PM IST

ಮುಂಬೈ(ಮಹಾರಾಷ್ಟ್ರ): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಫ್ರೂಟ್‌ನನ್ನು ರಾಷ್ಟ್ರೀಯ ತನಿಖಾ ದಳ ಇಂದು ಬಂಧಿಸಿದೆ. ಇಂದು ಬೆಳಗ್ಗೆ ವಿಚಾರಣೆಗಾಗಿ ವಶಕ್ಕೆ ಪಡೆದು ಸಲೀಂ ಫ್ರೂಟ್​ನನ್ನು ಬಂಧಿಸಲಾಗಿದೆ. ಫೆಬ್ರವರಿ 2022 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಿತು. 90ರ ದಶಕದಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಬಂಧ ಹೊಂದಿರುವ ವ್ಯಕ್ತಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಲ ದಿನಗಳ ಹಿಂದೆ ಕೇಂದ್ರ ತನಿಖಾ ದಳಕ್ಕೆ ಭೂಗತ ಜಗತ್ತು ಪಂಜಾಬ್​ದ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಂಜಾಬ್‌ನಲ್ಲಿ ಅಸ್ಥಿರತೆ ಹರಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭೂಗತ ಜಗತ್ತಿನ ಬೆಂಬಲ ಪಡೆಯುತ್ತಿದೆ ಎಂಬುದು ಬಹಿರಂಗವಾಗಿದೆ. ಮಾಹಿತಿ ಪ್ರಕಾರ, ಭೂಗತ ಲೋಕಕ್ಕೆ ಸಂಬಂಧಿಸಿದವರು ಮುಂಬೈನಿಂದ ಪಂಜಾಬ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವರ್ಗಾಯಿಸುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ಇಡಿ ಮತ್ತು ಎನ್‌ಐಎ ಮುಂಬೈ ಮತ್ತು ಥಾಣೆ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಿಕಟವರ್ತಿಗಳು ಮತ್ತು ದಾವೂದ್‌ಗೆ ಸಂಬಂಧಿಸಿರುವ ಶಂಕಿತ ವ್ಯಕ್ತಿಗಳ ಮೇಲೆ 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಮುಂಬೈನ 9, ಉತ್ತರ ಠಾಣೆಯ 1 ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಶೋಧ ಕಾರ್ಯಾಚರಣೆಯ ಹಲವು ದಾಖಲೆಗಳನ್ನು ಇಡಿ ಸಂಗ್ರಹಿಸಿತು.

ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಫ್ರೂಟ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಯಿತು. ಈ ನಡುವೆ ಕೆಲ ವರ್ಷಗಳ ಹಿಂದೆ ಸಲೀಂ ಫ್ರೂಟ್​ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಆ ವೇಳೆ, ತನಿಖೆ ನಡೆಸಿದಾಗ ಆತ ಮೂರು ವರ್ಷಗಳಲ್ಲಿ ಚೀನಾ, ಬ್ಯಾಂಕಾಕ್, ಸೌದಿ ಅರೇಬಿಯಾ, ಶ್ರೀಲಂಕಾ, ಟರ್ಕಿ ಸೇರಿದಂತೆ ಸುಮಾರು 17ರಿಂದ 18 ದೇಶಗಳಿಗೆ ಪ್ರವಾಸ ಮಾಡಿರುವುದು ಬೆಳಕಿಗೆ ಬಂದಿದೆ.

ಓದಿ:ಭಟ್ಕಳ ಸಹೋದರರು, ಛೋಟಾ ಶಕೀಲ್ ಸೇರಿ 18 ಮಂದಿಗೆ 'ಉಗ್ರ' ಪಟ್ಟ

ABOUT THE AUTHOR

...view details