ಆಗ್ರಾ(ಉತ್ತರ ಪ್ರದೇಶ): ನೋಯ್ಡಾದಿಂದ ಫಿರೋಜಾಬಾದ್‌ಗೆ ಹೋಗುತ್ತಿದ್ದ ಯುವತಿಯನ್ನು ಕಾರು ಚಾಲಕರು ಮಂಗಳವಾರ ತಡರಾತ್ರಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಂತ್ರಸ್ತೆ ದೂರಿನ ಮೇರೆಗೆ ಆಗ್ರಾದ ಎತ್ಮಾದಪುರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಫಿರೋಜಾಬಾದ್‌ನಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿ ನೊಯ್ಡಾದಲ್ಲಿ ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದು ಬಾಕಿ ಇರುವ ಸಂಬಳವನ್ನು ಪಡೆಯಲು ನೊಯ್ಡಾಕ್ಕೆ ತೆರಳಿದ್ದಳು ಎನ್ನಲಾಗಿದೆ. ಅದೇ ದಿನ ರಾತ್ರಿ ನೋಯ್ಡಾದ ಸೆಕ್ಟರ್ 37ನಿಂದ ಫಿರೋಜಾಬಾದ್ ತಲುಪಲು ಟ್ಯಾಕ್ಸಿ ಏರಿದ್ದಳು.