ಕರ್ನಾಟಕ

karnataka

ETV Bharat / bharat

ಛಾವಾಲಾ ರೇಪಿಸ್ಟ್​ಗಳ ಖುಲಾಸೆ: ಸಂತ್ರಸ್ತೆ ಕುಟುಂಬ ಬೇಸರ, ಮೇಲ್ಮನವಿ ಸಲ್ಲಿಕೆಗೆ ಸಜ್ಜು

ದೆಹಲಿಯ ಛಾವಾಲಾ ಅತ್ಯಾಚಾರ, ಕೊಲೆ ಕೇಸ್​ನ ಮೂವರು ಅಪರಾಧಿಗಳನ್ನು ಖುಲಾಸೆ ಮಾಡಿದ್ದಕ್ಕೆ ಸಂತ್ರಸ್ತೆ ಯುವತಿಯ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದ್ದು, ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.

delhi news in hindi  review petition against supreme court  gangrape aquittal victims parents  supreme court decision on gangrape case  ಛಾವಾಲಾ ರೇಪಿಸ್ಟ್​ಗಳ ಖುಲಾಸೆ  ಛಾವಾಲಾ ಅತ್ಯಾಚಾರಿಗಳ ಬಿಡುಗಡೆ  ಅತ್ಯಾಚಾರಿಗಳ ಬಿಡುಗಡೆಗೆ ಅಸಮಾಧಾನ  ಸಂತ್ರಸ್ತೆ ಕುಟುಂಬದಿಂದ ಮೇಲ್ಮನವಿ ಅರ್ಜಿ  ಸುಪ್ರೀಂ ತೀರ್ಪಿಗೆ ಛಾವಾಲಾ ಸಂತ್ರಸ್ತರ ಬೇಸರ  ದೆಹಲಿಯ ಛಾವಾಲಾ ಅತ್ಯಾಚಾರ  ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್ ಖುಲಾಸೆ  ಸುಪ್ರೀಂ ತೀರ್ಪಿಗೆ ಅಚ್ಚರಿ ಮತ್ತು ಬೇಸರ  ಮಹಿಳಾ ಆಯೋಗ ನಿರಾಶೆ  ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಜ್ಜು
ಛಾವಾಲಾ ರೇಪಿಸ್ಟ್​ಗಳ ಖುಲಾಸೆ

By

Published : Nov 8, 2022, 6:10 PM IST

Updated : Nov 9, 2022, 4:18 PM IST

ನವದೆಹಲಿ:ದೆಹಲಿಯ ಛಾವಾಲಾ ಅತ್ಯಾಚಾರ, ಕೊಲೆ ಪ್ರಕರಣದ ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್ ಖುಲಾಸೆ ಮಾಡಿದ್ದಕ್ಕೆ ಸಂತ್ರಸ್ತ ಯುವತಿಯ ಕುಟುಂಬ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತೀರ್ಪು ನಿರಾಸೆ ತಂದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

2012 ರಲ್ಲಿ ದೆಹಲಿಯ ಛಾವಾಲಾ ಪ್ರದೇಶದ ಯುವತಿಯನ್ನು ಅಪಹರಿಸಿದ ಮೂವರು ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಾದ ಬಳಿಕ ವಿಚಾರಣೆ ನಡೆಸಿದ್ದ ಪೊಲೀಸರು ಮೂವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ ಬಳಿಕ ಹೈಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್​ ಮೂವರಿಗೆ ಮರಣದಂಡನೆ ವಿಧಿಸಿತ್ತು.

ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅತ್ಯಾಚಾರಿಗಳು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಪೀಠ, ಆರೋಪಿಗಳನ್ನು ಪ್ರಕರಣದಿಂದಲೇ ಖುಲಾಸೆ ಮಾಡಿದೆ. ಇದು ಅಚ್ಚರಿ ಮತ್ತು ಅಸಮಾಧಾನ ತಂದಿದೆ.

ಮೇಲ್ಮನವಿ ಅರ್ಜಿ ಸಲ್ಲಿಕೆಗೆ ಸಜ್ಜು:ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಸುಪ್ರೀಂ ತೀರ್ಪಿಗೆ ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸಿರುವ ಸಂತ್ರಸ್ತೆಯ ತಾಯಿ ಇದನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು. ನ್ಯಾಯ ದೇಗುಲದ ನಿರ್ಧಾರ ನಿರಾಸೆ ತಂದಿದೆ. ಆದೇಶದ ವಿರುದ್ಧ ಮತ್ತೊಮ್ಮೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅಪರಾಧಿಗಳ ಬಿಡುಗಡೆ ಇಂತಹ ಘೋರ ಕೃತ್ಯ ಎಸಗುವವರಿಗೆ ಉತ್ತೇಜನ ನೀಡುವುದಲ್ಲದೇ, ಸಂತ್ರಸ್ತೆಯ ಆತ್ಮಕ್ಕೆ ನೋವುಂಟು ಮಾಡುತ್ತದೆ. ನನ್ನ ಮಗಳು ಕೀಚಕರಿಂದ ಬರ್ಬರವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಅಪರಾಧಿಗಳಿಗೆ ಯಾವುದೇ ಶಿಕ್ಷೆಯಿಲ್ಲದೆ ಬಿಟ್ಟಿರುವುದು ಬೇಸರ ತಂದಿದೆ ಎಂದರು.

ಅಪರಾಧಿಗಳಿಗೆ ಮರಣದಂಡನೆ ವಿಧಿಸದಿದ್ದರೂ ಪರವಾಗಿಲ್ಲ, ಕನಿಷ್ಠ ಜೀವಾವಧಿ ಶಿಕ್ಷೆಯಾಗಲಿ. ಮುಂದೆ ಇಂತಹ ಹೇಯ ಕೃತ್ಯಕ್ಕೆ ಯಾರೂ ಧೈರ್ಯ ಮಾಡುವುದಿಲ್ಲ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಮಾಡುವೆ ಎಂದು ಹೇಳಿದರು.

ಮಹಿಳಾ ಆಯೋಗ ನಿರಾಶೆ:ಪ್ರಕರಣದ ತೀರ್ಪಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, 19 ವರ್ಷದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿದೆ. ಭಯಾನಕ ಪ್ರಕರಣದ ಅಪರಾಧಿಗಳಿಗೆ ಹೈಕೋರ್ಟ್ ಮರಣದಂಡನೆ ವಿಧಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ. ಬಾಲಕಿಯ ಕಣ್ಣಿಗೆ ಆ್ಯಸಿಡ್ ಹಾಗೂ ಗುಪ್ತಾಂಗದಲ್ಲಿ ಮದ್ಯದ ಬಾಟಲಿ ಇಟ್ಟು ಕ್ರೌರ್ಯ ಮರೆದ ಅತ್ಯಾಚಾರಿಗಳಿಗೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಿಲ್ಲವೇ? ಎಂದು ಪ್ರಶ್ನಿಸಿ ಟ್ವೀಟ್​ ಮಾಡಿದ್ದಾರೆ.

ಓದಿ:ಛಾವಾಲಾ ರೇಪ್​ ಕೇಸ್​: ಮರಣದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಳನ್ನ ಖುಲಾಸೆ ಮಾಡಿ ಸುಪ್ರೀಂ

Last Updated : Nov 9, 2022, 4:18 PM IST

ABOUT THE AUTHOR

...view details