ಉತ್ತರಕಾಶಿ, ಉತ್ತರಾಖಂಡ್ :ಭಾರಿ ಮಳೆ ಮತ್ತು ಹಿಮಪಾತದ ಕಾರಣದಿಂದಾಗಿ ಉತ್ತರಾಖಂಡ್ನ ಉತ್ತರಕಾಶಿ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ, ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಕಾಶಿಯಲ್ಲಿ ಹಿಮಪಾತದ ಅವಾಂತರ ಜಿಲ್ಲೆಯ ಉಪ್ಲಾ ಟಕನೂರ್ ಸೇರಿ ಎತ್ತರದ ಮೋರಿ ಮತ್ತು ಬಾರ್ಕೋಟ್ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕಡಿಮೆ ತಾಪಮಾನದ ಕಾರಣದಿಂದಾಗಿ ಕೆಲವು ಪ್ರದೇಶಗಳಲ್ಲಿ ಪೈಪ್ಲೈನ್ಗಳು ಒಡೆದಿವೆ. ಪ್ರವಾಸಿ ಸ್ಥಳವಾದ ಹರ್ಷಿಲ್ನಲ್ಲಿ ನೀರಿನ ಅಭಾವವೂ ಕಾಣಿಸಿದೆ. ಈ ಪ್ರದೇಶಗಳ ಜನರು ಭಾಗೀರಥಿ ನದಿಯಿಂದ ನೀರು ಕೊಂಡೊಯ್ಯುತ್ತಿದ್ದಾರೆ.
ಹಿಮಪಾತದಿಂದಾಗಿ ರಸ್ತೆಗಳು ಹಿಮದಿಂದ ಆವೃತವಾಗಿವೆ. ಸುಕ್ಕಿ ಟಾಪ್‌ನಿಂದ ಗಂಗೋತ್ರಿಯವರೆಗೆ ಹಲವು ಸ್ಥಳಗಳಲ್ಲಿ ಗಂಗೋತ್ರಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಬಾರ್ಡರ್ ರೋಡ್ ಆರ್ಗನೈಷನ್ (BRO) ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ರಸ್ತೆ ಸಂಚಾರ ಸುಗಮಗೊಳಿಸಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಉತ್ತರಕಾಶಿ ಜಿಲ್ಲಾ ಕೇಂದ್ರದಿಂದ ಹರ್ಷಿಲ್ ಕಣಿವೆ ಮತ್ತು ಗಂಗೋತ್ರಿ ಧಾಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಸಂಚಾರ ಸ್ಥಗಿತವಾಗಿದೆ. ಕೆಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತವು 2 ಅಡಿಗಳಷ್ಟು ಶೇಖರಣೆಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೋವಿಡ್ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳಬಹುದು : ತಜ್ಞರು