ಕರ್ನಾಟಕ

karnataka

ETV Bharat / bharat

ಇಂದಿನಿಂದ 6 ತಿಂಗಳವರೆಗೆ ಉತ್ತರಕಾಶಿಯ ಗಂಗೋತ್ರಿ ಕಣಿವೆ ಬಂದ್​ - 6 ತಿಂಗಳವರೆಗೆ ಗಂಗೋತ್ರಿ ಕಣಿವೆ ಬಂದ್​

ಉತ್ತರಾಖಂಡ್​ನ ಗಂಗೋತ್ರಿ ಕಣಿವೆಯಲ್ಲಿ ಇಂದು ಸಕಲ ವಿಧಿವಿಧಾನಗಳನ್ನು ಪೂರೈಸುವ ಮೂಲಕ ಗಂಗೋತ್ರಿ ಧಾಮದ ದ್ವಾರವನ್ನು ಮುಚ್ಚಲಾಗಿದೆ. ಇಂದಿನಿಂದ 6 ತಿಂಗಳವರೆಗೆ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ದೇವಾಲಯ ಬಂದ್​ ಆಗಲಿದೆ.

gangotri-dham-kapat-closed-for-six-months-today
ಉತ್ತರಕಾಶಿಯ ಗಂಗೋತ್ರಿ ಕಣಿವೆ ಬಂದ್​

By

Published : Nov 15, 2020, 5:19 PM IST

ಉತ್ತರಕಾಶಿ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಗಂಗೋತ್ರಿ ಕಣಿವೆ ಚಳಿಗಾಲಿದ ಹಿನ್ನೆಲೆ ಇಂದಿನಿಂದ 6 ತಿಂಗಳವರೆಗೆ ಬಾಗಿಲು ಮುಚ್ಚಲಿದೆ.

ಉತ್ತರಕಾಶಿಯ ಗಂಗೋತ್ರಿ ಕಣಿವೆ ಬಂದ್​

2021 ರ ಏಪ್ರಿಲ್​ಗೆ ಪುನಃ ಬಾಗಿಲು ತೆರೆಯಲಾಗುತ್ತದೆ. ಚಳಿಗಾಲದಲ್ಲಿ ಈ ಕಣಿವೆಯಲ್ಲಿ ಹೆಚ್ಚಿನ ಮಂಜು ಬೀಳುವುದರಿಂದ, ಚಳಿ ಹೆಚ್ಚಿರುವುದರಿಂದ ಇಲ್ಲಿಗೆ ತೆರಳಲು ಅನುಮತಿ ಇಲ್ಲ, ಹೀಗಾಗಿ ಕಣಿವೆಗೆ 6 ತಿಂಗಳು ಪ್ರವೇಶವಿಲ್ಲ.

ಉತ್ತರಕಾಶಿಯ ಗಂಗೋತ್ರಿ ಕಣಿವೆ ಬಂದ್​

ಈ ಬಾರಿ ಕೊರೊನಾ ಲಾಕ್​ಡೌನ್​ ಪರಿಣಾಮ ಪವಿತ್ರ ಗಂಗೆಯ ಗಂಗೋತ್ರಿ ಧಾಮ ಮುಚ್ಚಿದ್ದರಿಂದ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿತು. ನಂತರವೂ ಮಾ ಗಂಗಾ ಡೋಲಿ ಮುಖಾ ಗ್ರಾಮಕ್ಕೆ 3 ಕಿ.ಮೀ ದೂರದಲ್ಲಿರುವ ಮಾರ್ಕಂಡೇಯ ದೇವಸ್ಥಾನದಲ್ಲಿ ಜಂಗಲಾ ಮಾರ್ಗದಿಂದ ಕಾಲ್ನಡಿಗೆಯಲ್ಲಿ ಬಂದ ಭಕ್ತರು ರಾತ್ರಿ ವಿಶ್ರಾಂತಿ ಪಡೆದು ಸ್ಥಳೀಯ ಜನರು ಮತ್ತು ಭಕ್ತರು ರಾತ್ರಿಯಿಡೀ ಗಂಗಾ ದೇವಿಯ ಕೀರ್ತನೆಗಳನ್ನು ಭಜಿಸಿ ದೇವಿಯನ್ನು ಪೂಜಿಸಿದರು.

ಚಳಿಗಾಲ ಮುಗಿದ ನಂತರ ಗಂಗೋತ್ರಿ ದೇವಾಲಯದ ಪೋರ್ಟಲ್‌ಗಳನ್ನು ಏಪ್ರಿಲ್‌ನಲ್ಲಿ ತೆರೆಯಲಾಗುತ್ತದೆ.

ABOUT THE AUTHOR

...view details