ಕರ್ನಾಟಕ

karnataka

ETV Bharat / bharat

ಮಿಥುನ್ ಲಗ್ನದ ಶುಭ ಗಳಿಗೆಯಲ್ಲಿ ಗಂಗೋತ್ರಿ ಧಾಮದ ಬಾಗಿಲು ಓಪನ್​ - ಗಂಗೋತ್ರಿ ಧಾಮದ ಬಾಗಿಲು ಓಪನ್

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಗಂಗೋತ್ರಿ ಧಾಮದ ಬಾಗಿಲುಗಳನ್ನು ಇಂದು ಬೆಳಗ್ಗೆ 7.31ಕ್ಕೆ ಮಿಥುನ್ ಲಗ್ನದ ಶುಭ ಗಳಿಗೆಯಲ್ಲಿ ತೆರೆಯಲಾಗಿದೆ.

Gangotri Dham doors opened
ಮಿಥುನ್ ಲಗ್ನದ ಶುಭ ವೇಳೆ ಗಂಗೋತ್ರಿ ಧಾಮದ ಬಾಗಿಲು ಓಪನ್​

By

Published : May 15, 2021, 8:10 AM IST

ಉತ್ತರಕಾಶಿ:ಇಂದು ಶುಭ ಮುಹೂರ್ತದಲ್ಲಿ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಗಂಗೋತ್ರಿ ಧಾಮದ ಬಾಗಿಲುಗಳನ್ನು ತೆರೆಯಲಾಗಿದೆ. ಆದರೆ ದೇಶದಲ್ಲಿ ಕೊರೊನಾ ಉಲ್ಬಣ ಹಿನ್ನೆಲೆ ಚಾರ್​ಧಾಮ್ (ನಾಲ್ಕು ಧಾಮ) ಯಾತ್ರೆ ಈಗಾಗಲೇ ರದ್ದುಗೊಂಡಿದೆ.

ಕೊರೊಂಕಲ್‌ನಲ್ಲಿನ ಗಂಗೋತ್ರಿ ಧಾಮದ ಬಾಗಿಲು ತೆರೆಯುವ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಯಿತು. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಗಂಗೋತ್ರಿ ಧಾಮದ ಬಾಗಿಲುಗಳನ್ನು ಮಿಥುನ್ ಲಗ್ನದ ಶುಭ ಗಳಿಗೆಯಲ್ಲಿ ಬೆಳಗ್ಗೆ 7.31ಕ್ಕೆ ತೆರೆಯಲಾಗಿದೆ. ಧಾಮವು ಮುಂದಿನ 6 ತಿಂಗಳ ಕಾಲ ಮುಕ್ತವಾಗಿರಲಿದೆ. ಶುಭ ಕಾರ್ಯದ ವೇಳೆ ಸೀಮಿತ ಸಂಖ್ಯೆಯಲ್ಲಿ ಯಾತ್ರಿಕರು, ಪುರೋಹಿತರು ಇದ್ದರು.

ಮಿಥುನ್ ಲಗ್ನದ ಶುಭ ವೇಳೆ ಗಂಗೋತ್ರಿ ಧಾಮದ ಬಾಗಿಲು ಓಪನ್​

ನಿನ್ನೆ ಅಭಿಜಿತ್ ಮುಹೂರ್ತದಲ್ಲಿ 12: 15 ಯಮುನೋತ್ರಿ ಧಾಮದ ಬಾಗಿಲುಗಳನ್ನು ತೆರೆಯಲಾಗಿದೆ. ಯಮುನೋತ್ರಿ ಇತಿಹಾಸದಲ್ಲಿ ಎರಡನೇ ಬಾರಿಗೆ ಚಾರ್​ಧಾಮ್ ಯಾತ್ರೆ ಭಕ್ತರಿಲ್ಲದೆ ಆರಂಭವಾಗಿದೆ.

ಚಾರ್​​ ಧಾಮ್ ಬಾಗಿಲು ತೆರೆಯುವ ದಿನಗಳು:

ಯಮುನೋತ್ರಿ ಧಾಮ - 14 ಮೇ 2021 (ನಿನ್ನೆ ತೆರೆಯಲ್ಪಟ್ಟಿದೆ)

ಗಂಗೋತ್ರಿ ಧಾಮ - 15 ಮೇ 2021 ( ಇಂದು ತೆರೆದಿದೆ)

ಕೇದಾರನಾಥ್​​ ಧಾಮ - 17 ಮೇ 2021

ಬದ್ರಿನಾಥ್ ಧಾಮ - 18 ಮೇ 2021

ಇದನ್ನೂ ಓದಿ:ಹುಟ್ಟುವ ಕಂದನಿಗಾಗಿ ಪಾದರಕ್ಷೆ ಖರೀದಿಸಿದ್ದ ಅಮ್ಮ.. ಚಿಕಿತ್ಸೆ ಫಲಿಸದೆ ಗರ್ಭಿಣಿ ವಿಧಿವಶ

ABOUT THE AUTHOR

...view details