ಕರ್ನಾಟಕ

karnataka

ETV Bharat / bharat

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ; ಬಂಗಾಳದಲ್ಲಿ ಮಳೆಗೆ 14 ಬಲಿ - ಗಂಗಾ ನದಿಯ ನೀರಿನ ಮಟ್ಟ

ಧಾರಾಕಾರ ಮಳೆಯಿಂದಾಗಿ ಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯುದ್ದಕ್ಕೂ ಇರುವ ತಗ್ಗು ಪ್ರದೇಶಗಳು ಬಹುತೇಕ ಜಲಾವೃತಗೊಂಡಿವೆ. ಇದರಿಂದ ಬೆಳೆ ಹಾನಿ ಸೇರಿದಂತೆ ನದಿ ತೀರದ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.

Ganga flowing above danger mark in Patna
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ; ಪಾಟ್ನಾಗೆ ಎಚ್ಚರಿಕೆ..!

By

Published : Aug 3, 2021, 4:50 PM IST

Updated : Aug 3, 2021, 5:37 PM IST

ಪಾಟ್ನಾ(ಬಿಹಾರ): ಭಾರಿ ಮಳೆಯಿಂದಾಗಿ ಗಂಗಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಪರಿಣಾಮ ಘಟ್ಟಗಳು ಮುಳುಗಿ ಹೋಗಿವೆ. ನದಿಯುದ್ದಕ್ಕೂ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ಮಳೆ ಹೆಚ್ಚಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ

ಗಂಗಾ ಮತ್ತು ಇತರ ನದಿಗಳ ನೀರು ಅಮಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಪಾಟ್ನಾಗೆ ಅಪಾಯವನ್ನುಂಟುಮಾಡಬಹುದು ಎಂಬ ಭಯವಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ಆಗಸ್ಟ್ 4 ರವರೆಗೆ ಬಿಹಾರದ ವಿವಿಧ ಭಾಗಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚಿನ ಮುನ್ಸೂಚನೆ ನೀಡಿದ್ದು, ಹಳದಿ ಎಚ್ಚರಿಕೆಯನ್ನೂ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಐಎಂಡಿಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಕಡಿಮೆ - ಒತ್ತಡದ ಪ್ರದೇಶದ ಚಲನೆಯು ದೇಶದ ಪೂರ್ವ ಭಾಗಗಳ ಕಡೆಗೆ ಭಾರಿ ಮಳೆಯಾಗಲು ಕಾರಣವಾಗಲಿದೆ ಎಂದು ಮಾಹಿತಿ ನೀಡಿದೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಬಂಗಾಳದಲ್ಲಿ 14 ಮಂದಿ ಬಲಿ

ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಮಳೆಯಿಂದ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದು, ಗೋಡೆ ಕುಸಿತ ಸೇರಿದಂತೆ ಹಲವು ಅವಘಡಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ದಾಮೋದರ್‌ ವ್ಯಾಲಿ ಕಾರ್ಪೋರೇಷನ್‌ ಡ್ಯಾಂನಿಂದ ಹೆಚ್ಚಿನ ನೀರು ಹರಿ ಬಿಟ್ಟ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 2.5 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ
Last Updated : Aug 3, 2021, 5:37 PM IST

ABOUT THE AUTHOR

...view details