ಕರ್ನಾಟಕ

karnataka

ETV Bharat / bharat

ಪಂಜಾಬ್​ನಲ್ಲಿ ಗ್ಯಾಂಗ್​ ವಾರ್​.. ಕಲ್ಲು ತೂರಾಟ, ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನರು - ಗುಂಪುಗಳ ಮಧ್ಯೆ ಹೊಡೆದಾಟ

ಪಂಜಾಬ್​ ಲೂದಿಯಾನಾದಲ್ಲಿ ಗ್ಯಾಂಗ್​ ವಾರ್ ​ - ಕಲ್ಲು ತೂರಾಡಿ ಗುಂಡಿನ ದಾಳಿ ಮಾಡಿದ ಗುಂಪುಗಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಪತ್ತೆ ಕಾರ್ಯ ಶುರು.

ಪಂಜಾಬ್​ನಲ್ಲಿ ಗ್ಯಾಂಗ್​ ವಾರ್​..ಕಲ್ಲು ತೂರಾಟ, ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನರು
ಪಂಜಾಬ್​ನಲ್ಲಿ ಗ್ಯಾಂಗ್​ ವಾರ್​..ಕಲ್ಲು ತೂರಾಟ, ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನರು

By

Published : Jul 18, 2022, 3:21 PM IST

ಲೂಧಿಯಾನ:ಜನ್ಮದಿನದ ಪಾರ್ಟಿ ಆಯೋಜಿಸಿದ್ದ ಒಂದು ಗುಂಪಿನ ಮೇಲೆ ಇನ್ನೊಂದು ಗುಂಪು ದಾಳಿ ಮಾಡಿದೆ. ಈ ವೇಳೆ, ಉಭಯ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದು, ಗುಂಡಿನ ಸದ್ದು ಕೇಳಿ ಬಂದ ಘಟನೆ ಪಂಜಾಬ್​ನ ಲೂದಿಯಾನಾದಲ್ಲಿ ನಡೆದಿದೆ.

ಜಿಲ್ಲೆಯ ಸೆಕ್ಟರ್-32ರಲ್ಲಿ ಭಾನುವಾರ ರಾತ್ರಿ 7.15ರ ಸುಮಾರಿಗೆ ಎರಡು ಗುಂಪುಗಳು ಮಧ್ಯೆ ಹೊಡೆದಾಟ ನಡೆದಿದೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಭಯ ಬಣಗಳು ಪರಸ್ಪರ ಇಟ್ಟಿಗೆ, ಕಲ್ಲು ತೂರಾಟ ನಡೆಸಿವೆ. ಇದರಲ್ಲಿ ಒಂದು ಗುಂಪಿನ ಕಡೆಯಿಂದ ಗುಂಡಿನ ದಾಳಿಯೂ ನಡೆಸಲಾಗಿದೆ. ಇದು ಸ್ಥಳೀಯ ಜನರು ಭಯಭೀತಗೊಳಿಸಿದೆ. ಗ್ಯಾಂಗ್ ವಾರ್​ನಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಗುಂಪುಗಳ ಮಧ್ಯೆ ಇದ್ದ ದ್ವೇಷವೇ ಕಾರಣ ಎನ್ನಲಾಗಿದೆ.

ಘರ್ಷಣೆ ನಡೆಸಿದವವರನ್ನು ಶಿವಂ ಅರೋರ ಮೊಟ್ಟ ಮತ್ತು ವಿಶಾಲ್ ಗಿಲ್ ಗ್ಯಾಂಗ್ ಸದಸ್ಯರು ಎಂದು ಗುರುತಿಸಲಾಗಿದೆ. ವಾರ್​ ವೇಳೆ 3 ಗುಂಡುಗಳನ್ನು ಹಾರಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸತ್​ಬೀರ್​ ಸಿಂಗ್​ ತಿಳಿಸಿದರು.

ಓದಿ:ಉದ್ಧವ್ ಠಾಕ್ರೆಗೆ ಮತ್ತೊಂದು ಹಿನ್ನಡೆ... ಶಿವಸೇನೆ ನಾಯಕ ರಾಮದಾಸ್ ಕದಂ ರಾಜೀನಾಮೆ

ABOUT THE AUTHOR

...view details