ಆಳ್ವಾರ್ (ರಾಜಸ್ಥಾನ) : ಜಿಲ್ಲೆಯ ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೂನ್ 12 ರ ರಾತ್ರಿ ಟೆರೇಸ್ ಮೇಲೆ ದಂಪತಿ ಮಲಗಿದ್ದರು. ಆ ವೇಳೆ ಅಪ್ರಾಪ್ತೆ ಮೇಲೆ ನೆರೆಹೊರೆಯ ಐವರು ಯುವಕರು ಚಾಕು ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆ ಸಂಬಂಧ ರಾಮಗಢ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ವಿವಾಹಿತ ಅಪ್ರಾಪ್ತೆಯ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ವಿವಾಹಿತೆ ತನ್ನ ಪತಿಯೊಂದಿಗೆ ಟೆರೇಸ್ ಮೇಲೆ ಮಲಗಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಅಕ್ಕಪಕ್ಕದ ಐವರು ಯುವಕರು ಏಕಾಏಕಿ ಅಲ್ಲಿಗೆ ಬಂದು ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ವಿವಾಹಿತೆಯ ಪತಿ ನಿದ್ದೆಯಿಂದ ಎದ್ದಿದ್ದಾನೆ. ಇದರಿಂದ ಹೆದರಿದ ಕಾಮುಕರು ಅಲ್ಲಿಂದ ಪರಾರಿಯಾಗಿದ್ದಾರೆ.