ಕರ್ನಾಟಕ

karnataka

ETV Bharat / bharat

ರಾಂಚಿಯಲ್ಲಿ ಅಪ್ರಾಪ್ತ ಫುಟ್ಬಾಲ್​ ಆಟಗಾರ್ತಿ ಎಳೆದೊಯ್ದು ಗ್ಯಾಂಗ್​ ರೇಪ್​​ - ಈಟಿವಿ ಭಾರತ ಕನ್ನಡ ನ್ಯೂಸ್​

ಮನೆಗೆ ತೆರಳುತ್ತಿದ್ದ ಫುಟ್ಬಾಲ್​ ಆಟಗಾರ್ತಿ ಎಳೆದೊಯ್ದ ನಾಲ್ವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ರಾಂಚಿಯಲ್ಲಿ ಬೆಳಕಿಗೆ ಬಂದಿದೆ.

gang-rape
ಗ್ಯಾಂಗ್​ ರೇಪ್​​

By

Published : Aug 3, 2022, 9:50 AM IST

ರಾಂಚಿ:ಫುಟ್​ಬಾಲ್​ ಆಟ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ವರು ಕೀಚಕರು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ. ಈ ಬಗ್ಗೆ ಎಫ್​ಐಆರ್​ ದಾಖಲಾಗಿದೆ.

ಫುಟ್ಬಾಲ್​​ ಆಟಗಾರ್ತಿಯಾಗಿದ್ದ ಬಾಲಕಿ ಒಡಿಶಾದಲ್ಲಿ ನಡೆದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಬಳಿಕ ರೈಲು ನಿಲ್ದಾಣದಿಂದ ತಮ್ಮ ಮನೆಗೆ ಆಟೋದಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಬಂದ ನಾಲ್ವರು ಕೀಚಕರು ಬಲವಂತವಾಗಿ ಆಟೋ ಹತ್ತಿದ್ದಾರೆ. ಬಳಿಕ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಇದಕ್ಕೆ ಪ್ರತಿರೋಧ ಒಡ್ಡಿದ ಬಾಲಕಿಗೆ ಮಾರಕಾಸ್ತ್ರ ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಆಟೋವನ್ನು ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಅವರನ್ನು ಬೆಳಗ್ಗೆ ನಗರಕ್ಕೆ ಕರೆತಂದು ವಾಪಸ್​ ಬಿಟ್ಟಿದ್ದಾರೆ.

ಈ ಬಗ್ಗೆ ಬಾಲಕಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಅಪ್ರಾಪ್ತೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪರಾಧಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಓದಿ:ಮೀನುಗಾರರನ್ನು ಸಮುದ್ರಕ್ಕೆ ಎತ್ತಿ ಎಸೆದ ದೊಡ್ಡ ಅಲೆ: ಭಯಾನಕ ವಿಡಿಯೋ

ABOUT THE AUTHOR

...view details