ನವದೆಹಲಿ: ಪೊಲೀಸರ ಎಲ್ಲ ಕಠಿಣ ಕ್ರಮಗಳ ಹೊರತಾಗಿಯೂ ಹಾಗೆ ಮಹಿಳೆಯರ ಸುರಕ್ಷತೆಗಾಗಿ ಜಾರಿಗೆ ಬರುತ್ತಿರುವ ಹೊಸ ಯೋಜನೆಗಳ ಹೊರತಾಗಿಯೂ ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಪಶ್ಚಿಮ ಜಿಲ್ಲೆಯ ಹರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಜರುಗಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿ ಖ್ಯಾಲಾ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಹರಿನಗರದಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ಹುಡುಗರು ಆಕೆಯನ್ನು ಆ ಪ್ರದೇಶದ ಉದ್ಯಾನದ ಬಳಿ ಬಲವಂತವಾಗಿ ಎಳೆದೊಯ್ದು ಇಬ್ಬರೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ರಾತ್ರಿ ಪೂರ ತಮ್ಮ ಕೃತ್ಯ ಎಸಗಿದ್ದಾರೆ. ಬೆಳಗ್ಗೆ ವಿವಸ್ತ್ರಳಾಗಿದ್ದಾಕೆಯನ್ನು ನೋಡಿದ ಸಾರ್ವಜನಿಕರೊಬ್ಬರು ಆಕೆ ಸಹಾಯಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.