ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ... ರಾಜಕೀಯ ಪಕ್ಷದ ಮುಖಂಡರ ಪುತ್ರ ಭಾಗಿ!? - ಅಪ್ರಾಪ್ತೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದ್ದು, ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ.

GANG RAPE ON MINOR GIRL
GANG RAPE ON MINOR GIRL

By

Published : Jun 3, 2022, 1:57 PM IST

Updated : Jun 3, 2022, 2:36 PM IST

ಹೈದರಾಬಾದ್​:ಅಪ್ರಾಪ್ತೆಯೋರ್ವಳ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ನಡೆದ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳು ಅಪ್ರಾಪ್ತರು ಎಂದು ಹೇಳಲಾಗುತ್ತಿದೆ.

ಕಳೆದ ತಿಂಗಳ 28ರಂದು ಇಬ್ಬರು ಸ್ನೇಹಿತರ ಜೊತೆ ಸೇರಿ ಬಾಲಕಿ ಜುಬಿಲಿ ಹಿಲ್ಸ್ ಪಬ್​ಗೆ ತೆರಳಿದ್ದಳು. ಪಬ್​​ನಲ್ಲಿ ಪರಿಚಯವಾಗಿರುವ ಇತರೆ ಕೆಲ ಸ್ನೇಹಿತರೊಂದಿಗೆ ಬಾಲಕಿ ಹೊರಗಡೆ ಹೋಗಿದ್ದು, ಈ ವೇಳೆ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕಲುಷಿತ ನೀರು ಸೇವನೆ: ಮಕ್ಕಳು ಸೇರಿದಂತೆ 119 ಮಂದಿ ಆಸ್ಪತ್ರೆಗೆ ದಾಖಲು

ಮನೆಗೆ ಬಂದ ಬಾಲಕಿಯನ್ನ ತಂದೆ ಪ್ರಶ್ನೆ ಮಾಡಿದಾಗ ತನ್ನ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ತಂದೆ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದು, ಇದರಲ್ಲಿ ರಾಜಕೀಯ ಪಕ್ಷದ ಮುಖಂಡರ ಮಗನೋರ್ವ ಭಾಗಿಯಾಗಿದ್ದಾನೆಂದು ಹೇಳಲಾಗುತ್ತಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ 11 ಹಾಗೂ 12ನೇ ತರಗತಿಯಲ್ಲಿ ಎಲ್ಲ ಅಪರಾಧಿಗಳು ವ್ಯಾಸಂಗ ಮಾಡ್ತಿದ್ದು, ಓರ್ವ ರಾಜಕೀಯ ಪಕ್ಷದ ಮುಖಂಡರ ಪುತ್ರನಿದ್ದಾನೆಂದು ಹೇಳಲಾಗ್ತಿದೆ. ಆದರೆ, ಪೊಲೀಸರು ಇದನ್ನ ತಳ್ಳಿ ಹಾಕಿದ್ದಾರೆ. ಜುಬಿಲಿ ಹಿಲ್ಸ್​​ನಲ್ಲಿರುವ ಪಬ್​​ಗೆ ಬಾಲಕಿ ಹೋಗಿದ್ದು, ಅಲ್ಲಿಂದ ವಾಪಸ್ ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನ ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಈ ವೇಳೆ ದುಷ್ಕೃತ್ಯವೆಸಗಲಾಗಿದೆ.

Last Updated : Jun 3, 2022, 2:36 PM IST

ABOUT THE AUTHOR

...view details