ನವದೆಹಲಿ/ ಗಾಜಿಯಾಬಾದ್: ಗಾಜಿಯಾಬಾದ್‌ನ ರಾಜ್‌ನಗರ ಬಡಾವಣೆ ಪ್ರದೇಶದಲ್ಲಿ, 38 ವರ್ಷದ ಮಹಿಳೆಯೊಬ್ಬರ ಮೇಲೆ ಐವರು ವ್ಯಕ್ತಿಗಳು ವಾಹನದೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದ ಘಟನೆಗೆ ಸಂಬಂಧಿಸಿದಂತೆ ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ದೋಷಾರೋಪ ಪಟ್ಟಿ ದಾಖಲಿಸಿದ ನಂತರ ತಕ್ಷಣವೇ 4 ಜನರನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ಎಸ್ಪಿ ಸಿಟಿ 1, ನಿಪುನ್ ಅಗರವಾಲ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಅತ್ಯಾಚಾರ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗಾಜಿಯಾಬಾದ್ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ.
ದೆಹಲಿ ಯುವತಿ ಗಾಜಿಯಾಬಾದ್‌ನಿಂದ ರಾತ್ರಿ ಹಿಂತಿರುಗುತ್ತಿದ್ದಾಗ ಆಕೆಯನ್ನು ಕೆಲವರು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. 5 ಜನ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮತ್ತು ಮಹಿಳೆ ಖಾಸಗಿ ಭಾಗಗಳಲ್ಲಿ ರಾಡ್ ಅನ್ನು ಸೇರಿಸಿದ್ದಾರೆ. ರಾಡ್ ಇನ್ನೂ ಖಾಸಗಿ ಅಂಗದೊಳಗೇ ಇತ್ತು. ಗೋಣಿ ಚೀಲದಲ್ಲಿ ತುಂಬಿ ಬಿಸಾಡಿದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ. ಎಸ್‌ಎಸ್‌ಪಿ ಗಾಜಿಯಾಬಾದ್‌ಗೆ ನೋಟಿಸ್ ನೀಡಲಾಗಿದೆ ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.