ಕರ್ನಾಟಕ

karnataka

ETV Bharat / bharat

ಸಾಮೂಹಿಕ ಅತ್ಯಾಚಾರ: ಪೆಟ್ರೋಲ್‌ ಹಾಕಿ ಸುಟ್ಟಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು - ಈಟಿವಿ ಭಾರತ್​ ಕನ್ನಡ ನ್ಯೂಸ್​

ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಸಾಮೂಹಿಕ ಅತ್ಯಾಚಾರ
ಸಾಮೂಹಿಕ ಅತ್ಯಾಚಾರ

By

Published : May 31, 2023, 7:58 PM IST

ಸುಲ್ತಾನಪುರ (ಉತ್ತರ ಪ್ರದೇಶ) :ಅತ್ಯಾಚಾರದ ಬಳಿಕ ಪೆಟ್ರೋಲ್​ ಹಾಕಿ ಸುಟ್ಟಿದ್ದ ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಜನವರಿ ತಿಂಗಳನಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಅಪಹರಿಸಿ ಸೂರತ್‌ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಪೆಟ್ರೋಲ್ ಸುರಿದು ವಿದ್ಯಾರ್ಥಿನಿಯನ್ನು ಸುಟ್ಟಿದರಿಂದ ತೀವ್ರವಾಗಿ ಸಂತ್ರಸ್ತೆ ಗಾಯಗೊಂಡು ಲಕ್ನೋದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜನವರಿ 30 ರಂದು, ಜೈಸಿಂಗ್‌ಪುರ ಕೊಟ್ವಾಲಿ ಪ್ರದೇಶದ ಹಳ್ಳಿಯ ವಿದ್ಯಾರ್ಥಿನಿಯನ್ನು ಬಹ್ರಿ ಗ್ರಾಮದ ನಿವಾಸಿ ಮಹಾವೀರ್ ಅಲಿಯಾಸ್ ಬೀರೆ ಎಂಬಾತ ತನ್ನ ಸಹಚಾರರ ಸಹಾಯದಿಂದ ಅಪಹರಿಸಿದ್ದರು. ಮಹಾವೀರ್ ವಿದ್ಯಾರ್ಥಿನಿಯನ್ನು ಸೂರತ್‌ಗೆ ಕರೆದುಕೊಂಡು ಹೋಗಿದ್ದ. ಇತ್ತ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಮಹಾವೀರ್ ಹಾಗೂ ಆತನ ಸಹಚರರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು.

ಇದಾದ ಎರಡು ತಿಂಗಳ ನಂತರ ಮಾರ್ಚ್ 28 ರಂದು ಬೀರೆ ಮತ್ತು ಅವನ ಸಹಚರರು ಸೇರಿಕೊಂಡು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದರು. ಈ ವೇಳೆ, ಸಂತ್ರಸ್ತೆ ಪ್ರತಿರೋಧ ತೋರಿದ್ದಕ್ಕೆ ಆರೋಪಿಗಳು ಆಕೆಯ ಮೈ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಈ ಘಟನೆ ನಡೆದ ಬಳಿಕ ಆರೋಪಿ ಮಹಾವೀರ್ ಸಂತ್ರಸ್ತೆಯ ತಂದೆಗೆ ನಡೆದ ಘಟನೆ ಬಗ್ಗೆ ಫೋನ್‌ನಲ್ಲಿ ತಿಳಿಸಿದ್ದರು.

ಇನ್ನು ವಿಷಯ ತಿಳಿದ ಕೂಡಲೇ ಮಾರ್ಚ್ 29 ರಂದು ಸಂತ್ರಸ್ತೆಯ ತಂದೆ ನೇರವಾಗಿ ಎಸ್ಪಿ ಸೋಮೆನ್ ವರ್ಮಾ ಅವರನ್ನು ಭೇಟಿಯಾಗಿ ನಡೆದ ಘಟನೆಯನ್ನು ತಿಳಿಸಿ ಪ್ರಕರಣ ದಾಖಲಿಸಿದ್ದರು. ಎಸ್ಪಿ ಆದೇಶದ ಮೇರೆಗೆ ಪೊಲೀಸ್ ತಂಡ ಸೂರತ್‌ನ ಆಸ್ಪತ್ರೆಗೆ ತೆರಳಿ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ವಾಪಸ್ ಕರೆದುಕೊಂಡು ಬಂದಿದ್ದು, ಲಖನೌದ ಸಿವಿಲ್ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ :ಮಗಳನ್ನು ಬರ್ಬರವಾಗಿ ಕೊಂದ ಸಾಹಿಲ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೋಷಕರ ಆಗ್ರಹ.. ಕೇಜ್ರಿವಾಲ್​​ರಿಂದ 10 ಲಕ್ಷ ಪರಿಹಾರ ಘೋಷಣೆ

ಮತ್ತೊದೆಡೆ ಆರೋಪಿಗಳನ್ನು ಬಂಧಿಸಲು ಎಸ್‌ಪಿ ಸಿ.ಒ ಪ್ರಶಾಂತ್ ಸಿಂಗ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಆಗಿತ್ತು. ಈ ತಂಡಗಳು ಆರೋಪಿಗಳನ್ನು ಬಂಧಿಸಲು ಸೂರತ್ ಮತ್ತು ಇತರ ಸ್ಥಳಗಳಲ್ಲಿ ದಾಳಿ ನಡೆಸಿವೆ. ಈ ಸಂದರ್ಭದಲ್ಲಿ ಪ್ರಮುಖ ಆರೋಪಿ ಮಹಾವೀರ್ ಮತ್ತು ಧನಿರಾಮ್ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಗೆ ಶೇ 60 ರಷ್ಟು ಸುಟ್ಟಿದ ಗಾಯಗಳಾಗಿದ್ದವು. ಆರೋಗ್ಯದಲ್ಲಿ ಸುಧಾರಣೆ ಕಂಡ ಮೇಲೆ ಮೇ 16 ರಂದು ಕುಟುಂಬಸ್ಥರು ಮನೆಗೆ ಕರೆಕೊಂಡು ಬಂದಿದ್ದರು. ಆದರೆ, ನಿನ್ನೆ (ಮಂಗಳವಾರ) ಮಧ್ಯಾಹ್ನ ಸಂತ್ರಸ್ತೆಯ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆಕೆಯ ಕುಟುಂಬಸ್ಥರು ಬಿರ್ಸಿಂಗ್‌ಪುರ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದರು.

ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಎಸ್‌ಪಿ ಸಿಒ ಪ್ರಶಾಂತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ :ಮದುವೆಯಾಗಲು ನಿರಾಕರಿಸಿದ ಯುವತಿಗೆ 12 ಬಾರಿ ಚಾಕುವಿನಿಂದ ಇರಿದ ಕಿಡಿಗೇಡಿ ಪ್ರೇಮಿ!

ABOUT THE AUTHOR

...view details