ಕರ್ನಾಟಕ

karnataka

ETV Bharat / bharat

ಪಾಕ್​, ಕೆನಡಾ ಸೇರಿ ವಿದೇಶದಿಂದಲೇ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿರುವ ಭಾರತದ ಗ್ಯಾಂಗ್​ ಲೀಡರ್​​ಗಳು: ಎನ್​​ಐಎ - National Investigation Agency

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಮೂಲದ ಉನ್ನತ ಗ್ಯಾಂಗ್​ಸ್ಟರ್​ಗಲು ಮತ್ತು ವ್ಯಾಪಾರಿ ಸಹಚರರು ಹಾಗೂ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಮೂಲದ ಶಸ್ತ್ರಾಸ್ತ್ರ ಪೂರೈಕೆದಾರರ ಮೇಲೆ ಎನ್‌ಐಎ ಎರಡನೇ ಸುತ್ತಿನ ದಾಳಿ ಮಾಡಿದೆ.

gang-leaders-operating-their-activities-in-india-from-pakistan-canada-malaysia-australia-nia
ಪಾಕ್​, ಕೆನಡಾ ಸೇರಿ ವಿದೇಶದಿಂದಲೇ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿರುವ ಭಾರತದ ಗ್ಯಾಂಗ್​ ಲೀಡರ್​​ಗಳು: ಎನ್​​ಐಎ

By

Published : Oct 18, 2022, 9:17 PM IST

ನವದೆಹಲಿ: ಗ್ಯಾಂಗ್​ಸ್ಟರ್​ಗಳ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಘಾತಕಾರಿ ಅಂಶಗಳನ್ನು ಬಯಲಿಗೆ ಹಾಕಿದೆ. ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಭಾರತದ ಗ್ಯಾಂಗ್​ ಲೀಡರ್​​ಗಳು ಮತ್ತವರ ಸದಸ್ಯರು ಪಾಕಿಸ್ತಾನ, ಕೆನಡಾ, ಮಲೇಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಿಂದ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಎನ್​​ಐಎ ಪತ್ತೆ ಹಚ್ಚಿದೆ.

ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕರು, ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಕಳ್ಳಸಾಗಣೆದಾರರ ಕಾರ್ಯಾಚರಣೆಗಳಿಗೆ ಕಡಿವಾಣ ಹಾಕಲು ಎನ್‌ಐಎ ಮಂಗಳವಾರ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದೆ.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಮೂಲದ ಉನ್ನತ ಗ್ಯಾಂಗ್​ಸ್ಟರ್​ಗಳ ಕ್ರಿಮಿನಲ್ ಚಟುವಟಿಕೆ ಮತ್ತು ವ್ಯಾಪಾರಿ ಸಹಚರರು ಹಾಗೂ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಮೂಲದ ಶಸ್ತ್ರಾಸ್ತ್ರ ಪೂರೈಕೆದಾರರ ಮೇಲೆ ಎನ್‌ಐಎ ನಡೆಸಿದ ಎರಡನೇ ಸುತ್ತಿನ ದಾಳಿ ಇದಾಗಿದೆ.

ಈ ದಾಳಿ ವೇಳೆ ಈಶಾನ್ಯ ದೆಹಲಿಯ ಗೌತಮ್ ವಿಹಾರ್ ಮೂಲದ ವಕೀಲ ಆಸಿಫ್ ಖಾನ್ ಎಂಬುವವರ ಮನೆಯಲ್ಲಿ ಐದು ಪಿಸ್ತೂಲ್‌ ಮತ್ತು ರಿವಾಲ್ವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹರಿಯಾಣ ಮತ್ತು ದೆಹಲಿಯ ವಿವಿಧ ದರೋಡೆಕೋರರೊಂದಿಗೆ ಖಾನ್ ಸಂಪರ್ಕ ಹೊಂದಿದ್ದಾನೆ ಎಂದು ಎನ್‌ಐಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಲಂದ್‌ಶಹರ್‌ನಲ್ಲಿರುವ ಖುರ್ಜಾ ಎಂಬುವವರಿಂದ ಕೆಲ ದೋಷಾರೋಪಣೆ ದಾಖಲೆಗಳು, ಡಿಜಿಟಲ್ ಸಾಧನಗಳು, ಬೇನಾಮಿ ಆಸ್ತಿಯ ವಿವರಗಳು, ನಗದು, ಚಿನ್ನದ ಬಿಸ್ಕಟ್​ಗಳು ಮತ್ತು ಚಿನ್ನಾಭರಣಗಳು, ಕೆಲ ಬೆದರಿಕೆವೊಡ್ಡುವ ಪತ್ರ ವಶಪಡಿಸಿಕೊಳ್ಳಲಾಗಿದೆ. ಹರಿಯಾಣದ ಸೋನೆಪತ್‌ನ ರಾಜೇಶ್ ಅಲಿಯಾಸ್ ರಾಜು ಮೋಟಾ ಸೇರಿದಂತೆ ಅಕ್ರಮ ಮದ್ಯ ಸರಬರಾಜು ಮಾಫಿಯಾದಲ್ಲಿ ಭಾಗಿಯಾಗಿರುವ ಗ್ಯಾಂಗ್​ಸ್ಟರ್​ಗಳ ಸಹಚರರನ್ನೂ ಇಂದಿನ ದಾಳಿಯ ಟಾರ್ಗೆಟ್​ ಆಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಒಟ್ಟು 52 ಸ್ಥಳಗಳಲ್ಲಿ ಶೋಧ ಕಾರ್ಯ:ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 52 ಕಡೆಗಳಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪಂಜಾಬ್‌ನ ಅಬೋಹರ್, ಭಟಿಂಡಾ, ಮುಕ್ತಸರ್ ಸಾಹಬ್, ಮೊಗಾ, ಲುಧಿಯಾನ, ಚಂಡೀಗಢ, ಮೊಹಾಲಿ ಜಿಲ್ಲೆಗಳು, ಹರಿಯಾಣದ ಪೂರ್ವ ಗುರುಗ್ರಾಮ್, ಭಿವಾನಿ, ಯಮುನಾ ನಗರ, ಸೋನಿಪತ್, ಮಹೇಂದ್ರಗಢ, ಮನೇಸರ್, ರೇವಾರಿ, ರೋಹ್ಟಕ್ ಮತ್ತು ಜಜ್ಜರ್ ಜಿಲ್ಲೆಗಳು ಹಾಗೂ ರಾಜಸ್ಥಾನದ ಚುರು, ಭರತ್‌ಪುರ ಮತ್ತು ಅಲ್ವಾರ್ ಜಿಲ್ಲೆಗಳು ಹಾಗೂ ನೋಯ್ಡಾ, ಬುಲನ್‌ಶೆಹರಂಡ್ ಸೋನ್‌ಭದ್ರ ಜಿಲ್ಲೆ ಮತ್ತು ದೆಹಲಿ ಮತ್ತು ಎನ್​ಸಿಆರ್​ನ ದ್ವಾರಕಾ ಜಿಲ್ಲೆಯಲ್ಲಿ ದಾಳಿ ಮಾಡಲಾಗಿದೆ.

ಪ್ರಮುಖ ಗ್ಯಾಂಗ್​ಸ್ಟರ್​ಗಳ ಅಪರಾಧ ಕೃತ್ಯಗಳು ಸ್ಥಳೀಯವಾಗಿ ಇದ್ದು ನಡೆಸಿರುವುದಲ್ಲ. ಭಯೋತ್ಪಾದಕರು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆ ಕಾರ್ಟೆಲ್‌ಗಳು ಮತ್ತು ನೆಟ್‌ವರ್ಕ್‌ಗಳ ನಡುವೆ ಆಳವಾಗಿ ಬೇರೂರಿರುವ ಪಿತೂರಿಯಾಗಿದೆ. ಅವರು ದೇಶದ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದಾಗಿ ತನಿಖೆಯಿಂದ ಬಹಿರಂಗವಾಗಿದೆ ಎಂದು ಎನ್‌ಐಎ ಹೇಳಿದೆ.

ಪಂಜಾಬ್‌ನಲ್ಲಿ ನಡೆದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕಾಮ್ರೇಡ್ ಬಲ್ವಿಂದರ್ ಸಿಂಗ್ ಹತ್ಯೆಯಂತಹ ಪ್ರಕರಣಗಳಲ್ಲಿ ವಿವಿಧ ರಾಜ್ಯಗಳ ಜೈಲುಗಳ ಒಳಗಿನಿಂದ ಈ ಪಿತೂರಿಗಳನ್ನು ರೂಪಿಸಲಾಗಿವೆ. ವಿದೇಶದಲ್ಲಿ ನೆಲೆಗೊಂಡಿರುವ ಸಂಘಟಿತ ಜಾಲದಿಂದ ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಇಂತಹ ಭಯೋತ್ಪಾದಕ ಜಾಲಗಳು ಮತ್ತು ಇದಕ್ಕೆ ಸಿಗುತ್ತಿರುವ ಧನಸಹಾಯ ಮತ್ತು ನೆರವಿನ ಜಾಲಕ್ಕೆ ಕಡಿವಾಣ ಹಾಕಲು ದಾಳಿ ಮಾಡಲಾಗುತ್ತಿದೆ. ಈ ಗ್ಯಾಂಗ್‌ಗಳು ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿದ್ದು, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮೂಲಕ ಇಂತಹ ಅಪರಾಧ ಚಟುವಟಿಕೆಗಳನ್ನು ನಡೆಸಲು ಹಣವನ್ನು ಸಂಗ್ರಹಿಸುತ್ತಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಎಂಬಿಎಸ್ ಗ್ರೂಪ್, ಮುಸದ್ದಿಲಾಲ್ ಜ್ಯುವೆಲರ್ಸ್ ಮೇಲೆ ಇಡಿ ದಾಳಿ: 100 ಕೋಟಿ ಮೌಲ್ಯದ ಚಿನ್ನ, ವಜ್ರ ವಶ

ABOUT THE AUTHOR

...view details