ಪುಣೆ, ಮಹಾರಾಷ್ಟ್ರ:ಗೌರಿ ಗಣೇಶ ಹಬ್ಬ ಬಂದ್ರೆ ಸಾಕು ಭಾರತದಲ್ಲಿ ಭಾರೀ ಸಡಗರ. ಎಲ್ಲೆಡೆ ಗಣೇಶನ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಮಾಡುತ್ತಾರೆ. ಕಳೆದ ವರ್ಷ ಕೊರೊನಾ ಕಾರಣದಿಂದ ಈ ಹಬ್ಬವನ್ನು ಅಷ್ಟಾಗಿ ಸಂಭ್ರಮದಿಂದ ಆಚರಿಸಲಾಗದಿದ್ದರೂ ಗಣಪನಿಗೆ ನಿಯಮಾನುಸಾರ ಏನು ಸಲ್ಲಿಸಬೇಕೋ ಅದನ್ನು ಭಕ್ತರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಇನ್ನು ಪುಣೆಯಲ್ಲಿ ಐದು ವಿಶಿಷ್ಟ ಗಣಪಗಳನ್ನು ದಶಕಗಳ ಕಲಾದಿಂದಲೂ ಪೂಜಿಸುತ್ತಾ ಬರುತ್ತಿದ್ದಾರೆ ಆ ಗಣೇಶೋತ್ಸವದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಮಾಹಿತಿ ಇಲ್ಲಿದೆ..
ಕಸಬಾ ಗಣಪತಿ:ಕಸಬ ಗಣಪತಿಯನ್ನು ಪುಣೆಯ ಗ್ರಾಮ ದೇವತೆ ಎಂದು ಕರೆಯಲಾಗುತ್ತದೆ. ಈ ಕಸಬ ಗಣಪತಿಯ ದೇವಸ್ಥಾನವು ಛತ್ರಪತಿ ಶಿವಾಜಿ ಮಹಾರಾಜರ ಕಾಲದ್ದು ಎಂದು ಹೇಳಲಾಗುತ್ತದೆ. 1893 ರಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು. ಅಂದಿನಿಂದ ಈ ಗಣಪತಿಯನ್ನು ಮೊದಲ ಗಣಪತಿ ಎಂದು ಕರೆಯಲಾಗುತ್ತದೆ. ಪುಣೆಯ ನಿಮಜ್ಜನ ಮೆರವಣಿಗೆ ಈ ಗಣಪತಿ ಮೂರ್ತಿಯಿಂದಲೇ ಆರಂಭವಾಗುತ್ತದೆ.
ತಂಬಡಿ ಜೋಗೇಶ್ವರಿ ಗಣಪತಿ: ಕಸಬ ಗಣಪತಿಯಂತೆ, ತಂಬಡಿ ಜೋಗೇಶ್ವರಿ ಗಣೇಶೋತ್ಸವ 1893 ರಿಂದ ಆರಂಭವಾಯಿತು. ತಂಬಡಿ ಜೋಗೇಶ್ವರಿ ಗಣಪನನ್ನೂ ಸಹ ಪುಣೆಯ ಗ್ರಾಮ ದೇವತೆ ಎಂದು ಕರೆಯುತ್ತಾರೆ.
ಗುರೂಜಿ ತಲೀಂ ಗಣಪಾಣಿ: ಶ್ರೀ ಗುರೂಜಿ ತಲೀಂ ಗಣಪತಿಯನ್ನು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವೆಂದು ಕರೆಯಲಾಗುತ್ತದೆ. ಲೋಕಮಾನ್ಯ ತಿಲಕರು ಗಣೇಶೋತ್ಸವವನ್ನು ಆರಂಭಿಸುವ ಮೊದಲು, ಇದನ್ನು ಗಣಪತಿ ತಾಳಿಂನಲ್ಲಿ ಸ್ಥಾಪಿಸಲಾಗಿತ್ತು. ಭಿಕು ಶಿಂಧೆ, ನಾನಾಸಾಹೇಬ್ ಖಾಸ್ಗಿವಾಲೆ, ಶೇಖ್ ಕಸಮ್ ವಲ್ಲದ್ ಈ ಸೌಹಾರ್ದಯುತ ಹಬ್ಬಕ್ಕೆ ಅಡಿಪಾಯ ಹಾಕಿದವರು.