ನವದೆಹಲಿ:ಪಂಜಾಬ್, ಗೋವಾ, ಛತ್ತೀಸ್ಗಢ, ಗುಜರಾತ್ನ ರಾಜ್ಯಗಳ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕೋಸ್ಕರ ಅಸಮಾಧಾನಗಳು ಭುಗಿಲೆದ್ದಿವೆ. ಈ ಹಿನ್ನೆಲೆ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ನಟವರ್ ಸಿಂಗ್ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ನಟವರ್ ಸಿಂಗ್ ಕಾಂಗ್ರೆಸ್ ಬಿಜೆಪಿ ಸೋಲಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅವರು ಒಂದು ನಿಲುವನ್ನು ತೆಗೆದುಕೊಂಡರೇ, ತೀರ್ಪು ಕೆಟ್ಟದಾಗಿ ತೆಗೆದುಕೊಳ್ಳುತ್ತಾರೆ. ಅವರಿಗೆ ಸಲಹೆಗಾರರಿಲ್ಲ. ಅವರು ತಮ್ಮನ್ನು ತೀಸ್ ಮಾರ್ ಖಾನ್ ಎಂದೇ ಭಾವಿಸಿಕೊಳ್ಳುತ್ತಾರೆ ಎಂದು ನಟವರ್ ಸಿಂಗ್ ವ್ಯಂಗ್ಯವಾಡಿದ್ದಾರೆ.