ಕೋಲ್ಕತ್ತಾ:ಮೊಬೈಲ್ ಗೇಮಿಂಗ್ ಆ್ಯಪ್‌ಗಳ ಕಮಿಷನ್ ಹಣದ ಅಕ್ರಮದ ಜಾಡು ಹಿಡಿದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಶನಿವಾರ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೋಲ್ಕತ್ತಾ ಮೂಲದ ಮೊಬೈಲ್ ಗೇಮಿಂಗ್ ಆ್ಯಪ್ ಕಂಪನಿಯೊಂದರ ಪ್ರವರ್ತಕರ ಉದ್ಯಮಿ ಅಮೀರ್ ಖಾನ್ ನಿವಾಸದ ಮೇಲೆ ಈ ದಾಳಿ ನಡೆದಿದೆ. ಇಲ್ಲಿಯವರೆಗೆ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಚೀನಾ ಲೋನ್ ಆ್ಯಪ್ ನಂಟಿನ ಶಂಕೆ:ಜಾರಿ ನಿರ್ದೇಶನಾಲಯ 'ಇ-ನಗ್ಗೆಟ್ಸ್’ ಗೇಮಿಂಗ್ ಆ್ಯಪ್ ಹಾಗೂ ಅದರ ಪ್ರವರ್ತಕ ಉದ್ಯಮಿ ಆಮೀರ್ ಖಾನ್ ಅವರಿಗೆ ಸೇರಿದ 6 ಸ್ಥಳಗಳ ಮೇಲೆ ಶೋಧ ನಡೆಸುತ್ತಿದೆ. ಅಲ್ಲದೇ, ಆ್ಯಪ್‌ಗೆ ಚೀನಾ ಮೂಲದ ನಂಟಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೆರೆಯಾದ ಚೀನಾ ಮೂಲದ 'ಸಾಲದ ಆ್ಯಪ್' ಆರೋಪಿಗಳಿಗೂ ಹಾಗೂ ಗೇಮಿಂಗ್ ಆ್ಯಪ್‌ಗೂ ಇರುವ ಸಂಬಂಧದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.