ನವದೆಹಲಿ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಅತ್ಯಾವಶ್ಯಕ ಔಷಧಗಳ ಅನಧಿಕೃತ ದಾಸ್ತಾನು, ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್ನ ಅಪರಾಧ ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ಗೆ ದೆಹಲಿ ಸರ್ಕಾರದ ಔಷಧ ನಿಯಂತ್ರಕ ಹೇಳಿದೆ.
ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಅತ್ಯಾವಶ್ಯಕ ಫ್ಯಾಬಿ ಫ್ಲೂ ಮಾತ್ರೆಗಳನ್ನು ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿ ವಿತರಣೆ ಮಾಡಿತ್ತು. ಈ ಬಗ್ಗೆ ಗಮನ ಹರಿಸಿದ್ದ ದೆಹಲಿ ಹೈಕೋರ್ಟ್, ದೇಶಾದ್ಯಂತ ಔಷಧಗಳ ವ್ಯಾಪಕ ಕೊರತೆ ಇರುವ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಯಥೇಚ್ಛವಾಗಿ ಈ ಔಷಧಗಳನ್ನು ಸಂಗ್ರಹಿಸಿದ್ದು ಹೇಗೆ..? ಇದಕ್ಕೆ ಯಾವ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು. ಅಲ್ಲದೆ, ನಿಮ್ಮಿಂದ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ನಮಗೆ ಹೇಳಿ. ಬೇರೆಯವರನ್ನು ನೇಮಿಸುತ್ತೇವೆ ಎಂದು ಎಚ್ಚರಿಕೆ ನೀಡಿತ್ತು.