ನವದೆಹಲಿ:ಜಲ ಜೀವನ ಮಿಷನ್(JJM) ಕುರಿತು ಈಶಾನ್ಯ ರಾಜ್ಯಗಳ ಸಾರ್ವಜನಿಕರ ಆರೋಗ್ಯ ಇಂಜಿನಿಯರಿಂಗ್ ಇಲಾಖೆ (PHED) ಮಂತ್ರಿಗಳ ಸಮ್ಮೇಳನ ಇಂದು ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಕೇಂದ್ರದ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ವಹಿಸಿಕೊಳ್ಳಲಿದ್ದಾರೆ.
ಗುವಾಹಟಿಯ ಅಸ್ಸೋಂ ಆಡಳಿತ ಸಿಬ್ಬಂದಿ ಕಾಲೇಜಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಎಲ್ಲ 8 ಈಶಾನ್ಯ ರಾಜ್ಯಗಳ ಸಾರ್ವಜನಿಕರ ಆರೋಗ್ಯ ಇಂಜಿನಿಯರಿಂಗ್ ವಿಭಾಗದ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಸಮ್ಮೇಳನ ನಡೆಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಈಶಾನ್ಯ ರಾಜ್ಯಗಳಲ್ಲಿ ನೀರಿನ ಸೌಲಭ್ಯ ಇಲ್ಲದಿರುವ ಮನೆಗಳಿಗೆ ಆದಷ್ಟು ಬೇಗ ನೀರಿನ ಸಂಪರ್ಕ ಒದಗಿಸುವ ಕುರಿತಂತೆ ಹಾಗೂ ಈವರೆಗೆ ಈ ಯೋಜನೆಯು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಅನ್ನೋದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.