ನವದೆಹಲಿ:ಪೂರ್ವ ಮತ್ತು ಲಡಾಖ್ನ ಚುಶುಲ್ನಲ್ಲಿ ಇರುವ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಭಾರತದ ಬದಿಯಲ್ಲಿ ಇಂದು ಬೆಳಗ್ಗೆ 10: 30ರಿಂದ ಪ್ರಾರಂಭವಾಗಲಿರುವ ಹನ್ನೊಂದನೇ ಭಾರತೀಯ ಮತ್ತು ಚೀನಾದ ಉನ್ನತ ಮಟ್ಟದ ಹಿರಿಯ ಕಮಾಂಡರ್ ಮಾತುಕತೆಯಲ್ಲಿ ಕೆಲವು ಸಕರಾತ್ಮಕ 'ಪ್ರಗತಿ'ಯ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕೃತ ಮೂಲವೊಂದು ಈಟಿವಿ ಭಾರತಗೆ ತಿಳಿಸಿದೆ.
ಚರ್ಚಿತ ಪ್ರದೇಶಗಳು
ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಒಪ್ಪಿತ ನಿಯಮಗಳಿಗೆ ಅನುಸಾರವಾಗಿ ಸೈನ್ಯ ನಿಷ್ಕ್ರಿಯಗೊಳಿಸುವಿಕೆ ಈಗಾಗಲೇ ಜಾರಿಗೆ ಬಂದಿದೆ. ಇತರ ಮಿಲಿಟರಿ ಮುಖಾಮುಖಿ ಪ್ರದೇಶಗಳ ಪರಿಸ್ಥಿತಿ ಬದಲಾಗದೆ ಉಳಿದಿದೆ. ಶುಕ್ರವಾರದ ಮಾತುಕತೆಗಳು ಅದನ್ನು ಬದಲಾಯಿಸಲು ಪ್ರಯತ್ನಿಸಲಿವೆ. ಈಗಾಗಲೇ ಕೆಲವು ಸಾಮಾನ್ಯವಾದ ಉತ್ತಮ ನಿರೀಕ್ಷೆಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಮೂಲಗಳು ಹೇಳಿವೆ.
ಏಷ್ಯಾದ ಎರಡು ದೊಡ್ಡ ರಾಷ್ಟ್ರಗಳ ನಡುವೆ ಸೈನ್ಯದ ಮುಖಾಮುಖಿ ಎದುರಾಗುವಿಕೆಯು ಪರಸ್ಪರ ಮಾತುಕತೆಯ ಮೂಲಕ ಕೊನಗೊಂಡರೇ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಗಣನೀಯವಾಗಿ ತಗ್ಗಿದಂತಾಗುತ್ತದೆ. ಗೋಗ್ರಾ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಮ್ಚಾಕ್ ಪ್ರದೇಶಗಳ ಸಂಬಂಧ ಚರ್ಚೆಯಲ್ಲಿ 'ಪ್ರಗತಿ' ಸಾಧಿಸಿದರೆ ಉಭಯ ರಾಷ್ಟ್ರಗಳಿಗೆ ಒಳಿತು.
ಗೋಪ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ನಲ್ಲಿ ಸೇನೆಯನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಲಿದೆ. ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆಯೂ ನಡೆಯಲಿದೆ.
ಇದನ್ನೂ ಓದಿ: ಈಟಿವಿ ಭಾರತ್ ಇಂಪ್ಯಾಕ್ಟ್: ಚಾಮರಾಜನಗರದಲ್ಲಿ ಸಿರಿಂಜ್ನಲ್ಲಿ ಚಾಕೋಲೆಟ್ ಮಾರಾಟ-ಆರೋಗ್ಯಾಧಿಕಾರಿಗಳ ದಾಳಿ, ಪರಿಶೀಲನೆ
ಪ್ರಸ್ತುತ ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ತೊಡಗಿಸಿಕೊಳ್ಳಲಾಗಿದೆ. ಕಳೆದ ವರ್ಷ ಮೇ 4-5ರಂದು ಗಡಿ ಖ್ಯಾತೆಯಿಂದಾಗಿ ಪ್ಯಾಂಗೊಂಗ್ ತ್ಸೊದ ಉತ್ತರ ದಂಡೆಯ ಎಲ್ಎಸಿ ಬಳಿ ಭಾರತ-ಚೀನಾ ನಡುವೆ ಯುದ್ಧದಂತಹ ವಾತಾವರಣ ಸೃಷ್ಟಿಯಾಯಿತು.
ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ ಉಭಯ ರಾಷ್ಟ್ರಗಳು ಫೆಬ್ರವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿವೆ.