ಕರ್ನಾಟಕ

karnataka

ETV Bharat / bharat

'ಗಗನಯಾನ' ಮಿಷನ್: ಮುಂದಿನ ವರ್ಷಾಂತ್ಯ ಇಲ್ಲವೇ 2023ರಲ್ಲಿ ಆರಂಭ: ಜಿತೇಂದ್ರ ಸಿಂಗ್ - Gaganyaan mission

2022ರ ವೇಳೆಗೆ ಉಡಾವಣೆಗೆ ನಿಗದಿಯಾಗಿದ್ದ ದೇಶದ ಮಹತ್ವಾಕಾಂಕ್ಷೆಯ ಯೋಜನೆಯು ಕೋವಿಡ್‌ ಕಾರಣದಿಂದ ವಿಳಂಬವಾಯಿತು. ಇದು ಭೂಮಿಯ ಕೆಳ ಕಕ್ಷೆಯಲ್ಲಿ ಮಾನವಸಹಿತ ಕಾರ್ಯಾಚರಣೆಯನ್ನು ಆರಂಭಿಸುವ ಗುರಿ ಹೊಂದಿದೆ.

Gaganyaan mission
ರತದ ಗಗನಯಾನ ಮಿಷನ್ ಸುದ್ದಿ

By

Published : Sep 15, 2021, 9:54 PM IST

ನವದೆಹಲಿ:ಭಾರತದ 'ಗಗನಯಾನ' ಯೋಜನೆ ಮುಂದಿನ ವರ್ಷಾಂತ್ಯ ಅಥವಾ 2023ರ ಆರಂಭದ ವೇಳೆಗೆ ಶುರುವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

2022ರ ವೇಳೆಗೆ ಉಡಾವಣೆಗೆ ನಿಗದಿಯಾಗಿದ್ದ ಈ ಯೋಜನೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಇದು ಭೂಮಿಯ ಕೆಳ ಕಕ್ಷೆಯಲ್ಲಿ ಮಾನವಸಹಿತ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಿದೆ.

ನಾವು ಇದನ್ನು ನಿಜವಾಗಿಯೂ ಮಾಡಬಹುದಿತ್ತು. (2022 ರ ಹೊತ್ತಿಗೆ ಗಗನಯಾನವನ್ನು ಪ್ರಾರಂಭಿಸಲಾಯಿತು). ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಮಯದಲ್ಲಿ ನಾವು ಅದನ್ನು ಯೋಜಿಸಿದ್ದೆವು. ಆದರೆ ಕೋವಿಡ್‌ನಿಂದಾಗಿ ಅನಿವಾರ್ಯವಾದ ವಿಳಂಬದಿಂದಾಗಿ ಕಾರ್ಯಾಚರಣೆ ತಡವಾಗಿದೆ. ಬಹುಶಃ ಮುಂದಿನ ವರ್ಷಾಂತ್ಯದ ವೇಳೆಗೆ ಅಥವಾ 2023ರ ಆರಂಭದ ವೇಳೆಗೆ ನಾವಿದನ್ನು ಸಾಧಿಸುತ್ತೇವೆಂಬ ಭರವಸೆ ಇದೆ ಎಂದು ಸಚಿವರು ಹೇಳಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಐಸಿಸಿಐ) ಆಯೋಜಿಸಿದ್ದ ‘ಭಾರತ-ಓಷಿಯಾನಿಯಾ ಬಾಹ್ಯಾಕಾಶ ತಂತ್ರಜ್ಞಾನ ಪಾಲುದಾರಿಕೆಗಳ ಭವಿಷ್ಯದ ಕುರಿತ ವೆಬ್‌ನಾರ್‌ ಉದ್ದೇಶಿಸಿ ಜಿತೇಂದ್ರ ಸಿಂಗ್ ಈ ಬಗ್ಗೆ ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನವು ಪ್ರತಿಯೊಂದು ವಲಯದಲ್ಲಿಯೂ ವಿಶೇಷ ಪಾತ್ರ ಹೊಂದಿದೆ. ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ತುಂಬಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳಿಂದ ನಾಲ್ಕು ಜೈವಿಕ ಮತ್ತು ಎರಡು ಭೌತಿಕ ವಿಜ್ಞಾನ ಸಂಬಂಧಿತ ಮೈಕ್ರೊಗ್ರಾವಿಟಿ ಪ್ರಯೋಗಗಳನ್ನು ಗಗನಯಾನ ಕಾರ್ಯಕ್ರಮದ ಮಾನವರಹಿತ ಕಾರ್ಯಾಚರಣೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ABOUT THE AUTHOR

...view details