ನಾಗ್ಪುರ (ಮಹಾರಾಷ್ಟ್ರ): ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಎರಡು ಬಾರಿ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ನಾಗ್ಪುರದಿಂದ ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಮುಂಬೈ ಹೈಕೋರ್ಟ್‌ಗೆ ಎನ್‌ಐಎ ಮನವಿ ಸಲ್ಲಿಸಿದೆ. ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಮುಂಬೈ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ ಎನ್‌ಐಎ ಮೇಲ್ಮನವಿ ಸಲ್ಲಿಸಿದೆ.
ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರ ಹಾಗೂ ಪ್ರಮುಖ ಆರೋಪಿ ಜಯೇಶ್ ಪೂಜಾರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 30 ರೊಳಗೆ ಈ ನೋಟಿಸ್ಗೆ ಉತ್ತರ ನೀಡುವಂತೆ ನೀರ್ದೇಶಿಸಿದೆ. ಈ ಪ್ರಕರಣದ ಪೊಲೀಸ್ ತನಿಖೆ ವೇಳೆ ಭಯೋತ್ಪಾದಕರ ಲಿಂಕ್ ಕೂಡ ಇರುವುದು ಬಯಲಾಗಿತ್ತು. ಈ ಪ್ರಕರಣ ಸಂಬಂಧ ನಾಗ್ಪುರ ಪೊಲೀಸರು ಕೈದಿ ಜಯೇಶ್ ಪೂಜಾರಿಯನ್ನು ಬಂಧಿಸಿದ್ದಾರೆ. ನಂತರ ಬೆಳಗಾವಿ ಜೈಲಿನಿಂದ ಭಯೋತ್ಪಾದಕ ಅಫ್ಸರ್ ಪಾಷಾನ್ನು ಕೂಡ ಬಂಧಿಸಿದ್ದಾರೆ. ಜಯೇಶ್ ಪೂಜಾರಿ ಬೆಳಗಾವಿ ಜೈಲಿನಿಂದ ಜನವರಿ 14 ಹಾಗೂ ಮಾರ್ಚ್ 21 ರಂದು ಖಮ್ಲಾದಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆ ಮಾಡಿ, ಜೀವಬೆದರಿಕೆ ಹಾಕುವುದರ ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದನು. 2016ರಲ್ಲಿ ಮಾಡಿದ ಕೊಲೆ ಪ್ರಕರಣದಲ್ಲಿ ಜಯೇಶ್ ಪೂಜಾರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕರಣದ ತನಿಖೆ ನಡೆಸಿದ್ದ ನಾಗ್ಪುರ ಪೊಲೀಸರು ಬೆಳಗಾವಿ ಜೈಲಿನಿಂದ ಜಯೇಶ್ ಪೂಜಾರಿಯನ್ನು ಬಂಧಿಸಿದ್ದರು. ಆರೋಪಿಯ ವಿಚಾರಣೆಯ ವೇಳೆ ಈ ಪ್ರಕರಣದಲ್ಲಿ ಭಯೋತ್ಪಾದಕ ಅಫ್ಸರ್ ಪಾಷಾ ಭಾಗಿಯಾಗಿರುವ ಬಗ್ಗೆ ಆಘಾತಕಾರಿ ಮಾಹಿತಿಯನ್ನು ನೀಡಿದ್ದನು. ಜಯೇಶ್ ಪೂಜಾರಿ ನೀಡಿದ ಮಾಹಿತಿಯನ್ನು ಆಧರಿಸಿ ನಾಗ್ಪುರ ಪೊಲೀಸರು ಬೆಳಗಾವಿ ಜೈಲಿನಲ್ಲಿದ್ದ ಅಫ್ಸರ್ ಪಾಷಾನನ್ನು ಬಂಧಿಸಿ ನಾಗ್ಪುರಕ್ಕೆ ಕರೆತಂದಿದ್ದರು. ನಾಗ್ಪುರದಲ್ಲಿ ಜಯೇಶ್ ಪೂಜುಆರಿ ಹಾಗೂ ಅಫ್ಸರ್ ಪಾಷಾ ಅವರನ್ನು ಮುಖಾಮುಖಿ ವಿಚಾರಣೆ ನಡೆಸಲಾಯಿತು. ನಾಗ್ಪುರ ಜೊತೆಗೆ ಆರೋಪಿಗಳಿಗಿರುವ ಸಂಬಂಧ ಈ ವೇಳೆ ಬಯಲಾಗಿತ್ತು. ಸದ್ಯ ಇಬ್ಬರೂ ಆರೋಪಿಗಳು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.