ಕರ್ನಾಟಕ

karnataka

ETV Bharat / bharat

60 ಸೆಕೆಂಡ್​ಗಳಲ್ಲಿ ಬಸ್​ನಲ್ಲಿನ ಬೆಂಕಿ ನಿಗ್ರಹ ತಂತ್ರಜ್ಞಾನ: ಡಿಆರ್​ಡಿಒ ತಂಡ ಶ್ಲಾಘಿಸಿದ ಗಡ್ಕರಿ! - ಬಸ್​ನಲ್ಲಿನ ಬೆಂಕಿ ನಿಗ್ರಹ ಮಾಡುವ ತಂತ್ರಜ್ಞಾನ ಸುದ್ದಿ

ಬಸ್​ಗಳಲ್ಲಿ ಸಂಭವಿಸುವ ಬೆಂಕಿ ಅನಾಹುತ ತಪ್ಪಿಸಲು ಡಿಆರ್​ಡಿಒ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದು, ಅದಕ್ಕಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Gadkari congratulates DRDO
Gadkari congratulates DRDO

By

Published : Nov 9, 2020, 7:37 PM IST

Updated : Nov 9, 2020, 8:07 PM IST

ನವದೆಹಲಿ:ಬಸ್​ಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ದಿಢೀರ್​ ಬೆಂಕಿ ಕಾಣಿಸಿಕೊಂಡ ಸಂದರ್ಭಗಳಲ್ಲಿ ಅದನ್ನ ನಿಗ್ರಹಿಸಲು ಡಿಆರ್​ಡಿಒ ಹೊಸ ತಂತ್ರಜ್ಞಾನ ಕಂಡು ಹಿಡಿದ್ದಿದ್ದು, ಅದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀಶ್​ ಗಡ್ಕರಿ ಅಭಿನಂದನೆ ಸಲ್ಲಿಸಿದ್ದಾರೆ.

ಡಿಫೆನ್ಸ್ ರಿಸರ್ಚ್ ಹಾಗೂ ಡೆವೆಲೆಪ್​​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದು, ಇದರ ಪ್ರಕಾರ ಬಸ್​​ಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿಯನ್ನ ಕೇವಲ 30 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ 60 ಸೆಕೆಂಡುಗಳಲ್ಲಿ ನಿಗ್ರಹಿಸುತ್ತದೆ. ಈ ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ತಂಡವನ್ನ ಅಭಿನಂದಿಸಿದ್ದಾರೆ.

ಡಿಆರ್​ಡಿಒ ತಂತ್ರಜ್ಞಾನ ವೀಕ್ಷಣೆ ಮಾಡಿದ ಗಡ್ಕರಿ-ರಾಜನಾಥ್​ ಸಿಂಗ್​

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೊಂದಿಗೆ ಇದರ ವೀಕ್ಷಣೆ ಮಾಡಿರುವ ನಿತಿನ್​ ಗಡ್ಕರಿ ತದನಂತರ ಟ್ವೀಟ್ ಮಾಡಿದ್ದಾರೆ. ಮಾನವರ ಜೀವನ ರಕ್ಷಣೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಡ್ಕರಿ, ನಮಗೆ ಪ್ರತಿಯೊಬ್ಬ ಭಾರತೀಯನ ಜೀವನವೂ ಮುಖ್ಯವಾಗಿದ. ಪ್ರಮುಖವಾಗಿ ಬಸ್​ಗಳಲ್ಲಿ, ಅದರಲ್ಲೂ ವಿಶೇಷವಾಗಿ ಶಾಲಾ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸುವ ಅವಘಡ ತಪ್ಪಿಸಲು ಈ ತಂತ್ರಜ್ಞಾನ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.

Last Updated : Nov 9, 2020, 8:07 PM IST

ABOUT THE AUTHOR

...view details