ಕರ್ನಾಟಕ

karnataka

ETV Bharat / bharat

G20 Summit: ಮೃದಂಗ ನುಡಿಸಿ ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲಿರುವ 12 ವರ್ಷದ ಸಂಗೀತ ಕಲಾವಿದ ದಕ್ಷ್ - ಸಂಗೀತ ಕಚೇರಿ

G20 Summit: G20 ಶೃಂಗಸಭೆ ಹಿನ್ನೆಲೆ ರಾಜಧಾನಿ ದೆಹಲಿಯ ಪ್ರಮುಖ ಬೀದಿಗಳು ಅಲಂಕಾರಗೊಂಡಿವೆ. ಇದರೊಂದಿಗೆ ಶೃಂಗಸಭೆಗೆ ಅತಿಥಿಗಳನ್ನು ಸ್ವಾಗತಿಸಲು ಮೂರು ಗಂಟೆಗಳ ಸಂಗೀತ ಕಛೇರಿ ಆಯೋಜಿಸಲಾಗಿದ್ದು, ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಗೋಷ್ಠಿಯಲ್ಲಿ ಸಂಗೀತ ವಾದ್ಯಗಳನ್ನು ಪ್ರದರ್ಶಿಸುವ 78 ಕಲಾವಿದರ ಪೈಕಿ ದೆಹಲಿಯ ಬಾಲಕ ದಕ್ಷ್ ಭೂಪತಿ ಕೂಡ ಮೃದಂಗ ಕಲಾವಿದರಾಗಿ ಭಾಗವಹಿಸಲಿದ್ದಾರೆ.

G20 Summit
ಮೃದಂಗ ನುಡಿಸಿ ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲಿರುವ 12 ವರ್ಷದ ಸಂಗೀತ ಕಲಾವಿದ ದಕ್ಷ್...

By ETV Bharat Karnataka Team

Published : Sep 9, 2023, 7:29 AM IST

ನವದೆಹಲಿ:ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆಯಲಿರುವ ಔತಣಕೂಟದಲ್ಲಿ 12 ವರ್ಷದ ಬಾಲಕ ದಕ್ಷಿ ಮೃದಂಗ ಬಾರಿಸುವ ಮೂಲಕ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಮೂಲಗಳ ಪ್ರಕಾರ, ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲು ಆಯೋಜಿಸಲಾದ ಸಂಗೀತ ಕಛೇರಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಕನಿಷ್ಠ 78 ಸಂಗೀತಗಾರರು ಭಾಗವಹಿಸಲಿದ್ದಾರೆ.

ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸೋಮರ್‌ವಿಲ್ಲೆ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ದಕ್ಷ್ ಕೂಡ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಜಿ20 ಶೃಂಗಸಭೆಯ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ ಎಂದು ದಕ್ಷ್ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು, ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರು ಹಾಗೂ ತಮ್ಮ ಗುರುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಭೋಜನದ ವೇಳೆ ಭಾರತ ಮಂಟಪದಲ್ಲಿ ಸಂಗೀತ ಕಛೇರಿ ನಡೆಯಲಿದೆ ಎಂದು ರಿಹರ್ಸಲ್ ವೇಳೆ ತಿಳಿಸಲಾಗಿತ್ತು ಎಂದು ದಕ್ಷ್ ಹೇಳಿದ್ದಾರೆ. "ನಾವು ಸಿಹಿ ಆಹಾರದ ಜೊತೆಗೆ ಮತ್ತು ಸಿಹಿ ಸಂಗೀತವನ್ನೂ ಉಣ ಬಡಿಸಬೇಕಿದೆ ಎಂದು ಅವರು ಹೇಳುತ್ತಾರೆ. ಅತಿಥಿಗಳು ಸಿಹಿ ಖಾದ್ಯದ ಜೊತೆಗೆ ಸುಮಧುರ ಸಂಗೀತವನ್ನು ಆನಂದಿಸುತ್ತಾರೆ.

ಪ್ರತಿದಿನ ಐದಾರು ಗಂಟೆಗಳವರೆಗೆ ತಾಲೀಮು:ದಕ್ಷ್ ಸೇರಿದಂತೆ ಎಲ್ಲಾ ಕಲಾವಿದರು ಕಳೆದ ಒಂಬತ್ತು ದಿನಗಳಿಂದ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಪ್ರತಿದಿನ ಐದಾರು ಗಂಟೆಗಳ ಕಾಲ ತಾಲೀಮು ನಡೆಸುತ್ತಿದ್ದಾರೆ. ಆಗಸ್ಟ್ 31 ರಂದು ನಡೆಯುವ ಈ ಸಂಗೀತ ಕಛೇರಿಯಲ್ಲಿ ಭಾಗವಹಿಸಲು ತಮಗೆ ಆಹ್ವಾನ ಬಂದಿತ್ತು ಎಂದು ದಕ್ಷ್ ತಿಳಿಸಿದರು. ತಲಮಣಿ ಪಿವಿ ಭೂಪತಿ ಅವರು, ದಕ್ಷ್ ಅವರ ತಂದೆ ಹಾಗೂ ಗುರುವೂ ಆಗಿದ್ದಾರೆ. ತಲಮಣಿ ಪಿವಿ ಭೂಪತಿ ನಗರ ಮೂಲದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಸಂಗೀತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ತಲಮಣಿ ಪಿ.ವಿ. ಬೂಪತಿ ಮಾತನಾಡಿ, ನಾಲ್ಕು ತಲೆಮಾರುಗಳಿಂದ ನಮ್ಮ ಕುಟುಂಬದವರು ಸಂಗೀತಗಾರರು. ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ (ಸಿಸಿಆರ್​ಟಿ) ಕೇಂದ್ರದಿಂದ 10 ರಿಂದ 14 ವರ್ಷ ವಯಸ್ಸಿನ ಕಲಾವಿದರ ವಿಭಾಗದಲ್ಲಿ ದಕ್ಷ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾನೆ. ಬಾಲ್ಯದಿಂದಲೂ ಮೃದಂಗದಲ್ಲಿ ಆಸಕ್ತಿ ಹೊಂದಿದ್ದಾನೆ. ಆತ ನಾಲ್ಕನೇ ವಯಸ್ಸಿನಿಂದಲೇ ಮೃದಂಗ ನುಡಿಸುವುದನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ಎಂದು ತಿಳಿಸಿದರು.

ರಾಷ್ಟ್ರ ಪ್ರಶಸ್ತಿ ಗರಿ:ಕೋವಿಡ್​ -19 ಸಾಂಕ್ರಾಮಿಕ ಸಮಯದಲ್ಲಿ ದಕ್ಷ್ ಅವರನ್ನು ಶಾಲೆಯ ಕ್ವಾರಂಟೈನ್ ತರಬೇತುದಾರರನ್ನಾಗಿ ಮಾಡಲಾಯಿತು ಎಂದು ದಕ್ಷ್ ಅವರ ತಂದೆ ಹೇಳಿದರು. ಇದಾದ ನಂತರ ಸಂಗೀತ ಸ್ಪರ್ಧೆಯಲ್ಲಿ 6-12 ವರ್ಷದ ವಿಭಾಗದಲ್ಲಿ ದಕ್ಷ್ ಪ್ರಥಮ ಸ್ಥಾನ ಪಡೆದ. ಇದಲ್ಲದೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಸಂಗೀತಕ್ಕೆ ಅಭ್ಯಾಸ ಬಹುಮುಖ್ಯವಾಗಿದ್ದು, ದಕ್ಷ್​ನನ್ನು ಅಭ್ಯಾಸ ಮಾಡಿಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲಿಯವರೆಗೆ ಕಲಾವಿದ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಾನೋ ಅಲ್ಲಿಯವರೆಗೆ ಕಲೆಯ ಕಲಾವಿದನ ಹಿಡಿತದಲ್ಲಿ ಉಳಿಯುತ್ತದೆ ಎನ್ನುತ್ತಾರೆ ಅವರು.

ಇದನ್ನೂ ಓದಿ:ಭಾರತದ ವಿಶ್ವಸಂಸ್ಥೆ ಖಾಯಂ ಸದಸ್ಯತ್ವದ ಆಕಾಂಕ್ಷೆ ಅರ್ಥ ಮಾಡಿಕೊಂಡಿದ್ದೇನೆ: ಆಂಟೋನಿಯೊ ಗುಟೆರಸ್

ABOUT THE AUTHOR

...view details