ಕರ್ನಾಟಕ

karnataka

ETV Bharat / bharat

ರಾಜಸ್ಥಾನದ ಉದಯಪುರದಲ್ಲಿ ಜಿ20 ಶೆರ್ಪಾ ಸಭೆಗೆ ಚಾಲನೆ - ಅಭಿವೃದ್ಧಿ ಹೊಂದಿದ ರಾಷ್ಟ್ರಗಳು

ರಾಜಸ್ಥಾನದ ಉದಯಪುರದಲ್ಲಿ ಜಿ20 ರಾಷ್ಟ್ರಗಳ ಡಿ.7ರವರೆಗೆ ನಡೆಯಲಿರುವ ನಾಲ್ಕು ದಿನಗಳ ಶೆರ್ಪಾ ಸಭೆಗೆ ಚಾಲನೆ ನೀಡಲಾಗಿದೆ.

g20-sherpa-summit-dignitaries-welcomed-in-udaipur
ರಾಜಸ್ಥಾನದ ಉದಯಪುರದಲ್ಲಿ ಜಿ20 ಶೆರ್ಪಾ ಸಭೆಗೆ ಚಾಲನೆ

By

Published : Dec 4, 2022, 10:02 PM IST

ಉದಯಪುರ (ರಾಜಸ್ಥಾನ): ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡ ಬಳಿಕ ಮೊದಲ ಶೆರ್ಪಾ ಸಭೆಗೆ ಇಂದು ರಾಜಸ್ಥಾನದ ಉದಯಪುರದಲ್ಲಿ ಚಾಲನೆ ನೀಡಲಾಗಿದೆ. ಇಂದು ಮೊದಲ ದಿನದ ಸಭೆ ನಡೆದಿದ್ದು, ಡಿ.7ರವರೆಗೆ ಶೆರ್ಪಾ ಸಭೆ ಜರುಗಲಿದೆ.

ಮೊದಲ ಶೆರ್ಪಾ ಸಭೆ ಹಿನ್ನೆಲೆಯಲ್ಲಿ ಉದಯಪುರಗೆ ಆಗಮಿಸಿದ ಭಾರತದ ಶೆರ್ಪಾ ಅಮಿತಾಬ್ ಕಾಂತ್ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಜಿ20 ಶೆರ್ಪಾ ಸಭೆಯ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

ಭಾರತ ಜಿ20 ನೇತೃತ್ವ ವಹಿಸಿರುವುದು ಅತ್ಯಂತ ವಿಶೇಷವಾಗಿದೆ. ಈ ಶೆರ್ಪಾ ಸಭೆಗೆ ಜಗತ್ತಿನ ಜಿ20 ರಾಷ್ಟ್ರಗಳು ಸೇರಿದಂತೆ ಒಂಬತ್ತು ರಾಷ್ಟ್ರಗಳ ಜೊತೆಗೆ ಇತರ 13 ಸೌಹಾರ್ದ ರಾಷ್ಟ್ರಗಳ ಶೆರ್ಪಾಗಳನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಒಟ್ಟು 250 ಶೆರ್ಪಾಗಳು ಭಾಗವಹಿಸುತ್ತಿದ್ದಾರೆ ಎಂದು ಅಮಿತಾಬ್ ಕಾಂತ್ ತಿಳಿಸಿದರು.

ಜಗತ್ತಿನಲ್ಲಿ 200 ಮಿಲಿಯನ್ ಜನರು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ 100 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ವಿವಿಧ ವಿಷಯಗಳ ಬಗ್ಗೆ ಈ ಶೆರ್ಪಾ ಸಭೆಗಳಲ್ಲಿ 12 ಕಾರ್ಯಕಾರಿ ಗುಂಪುಗಳು ವಿಸ್ತಾರವಾಗಿ ಚರ್ಚೆ ನಡೆಸಲಿದೆ. ಒಟ್ಟಾರೆ, 12 ಸಚಿವಾಲಯಗಳ ವಿಷಯಗಳನ್ನು ಟಿಪ್ಪಣಿ ಮಾಡಿವೆ ಎಂದು ಮಾಹಿತಿ ನೀಡಿದರು.

ಜಾಗತಿಕ ಅರ್ಥಶಾಸ್ತ್ರ, ಸುಸ್ಥಿರ ಬೆಳವಣಿಗೆ, ಹಸಿರು ಅಭಿವೃದ್ಧಿ, ಡಿಜಿಟಲ್ ಪರಿವರ್ತನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಜಿ20 ದೇಶಗಳು ವಿಶ್ವದ ಜಿಡಿಪಿಯ ಶೇ.85, ಜಾಗತಿಕ ವ್ಯಾಪಾರದ ಶೇ.78 ಮತ್ತು ಪೇಟೆಂಟ್‌ಗಳ ಶೇ.90ರಷ್ಟು ಪಾಲು ಹೊಂದಿವೆ. ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಜಿ-20 ಗುಂಪು ಈ ಸಭೆಯ ಮೂಲಕ ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದೂ ಕಾಂತ್ ಹೇಳಿದರು.

ಇದೇ ವೇಳೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಒಗ್ಗೂಡದ ಹೊರತು ಜಗತ್ತಿನ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಿಲ್ಲ. ಪ್ರತಿದಿನ ಹೊಸ ಸವಾಲುಗಳು ಬರುತ್ತಿವೆ. ಪ್ರತಿಯೊಂದು ಸವಾಲು ಕೂಡ ಅವಕಾಶಗಳನ್ನು ನೀಡುತ್ತದೆ. ಅದನ್ನು ನಾವು ಸಕಾರಾತ್ಮಕ ದೃಷ್ಟಿಕೋನದಿಂದ ಮುನ್ನಡೆಯಬೇಕಿದೆ. ಈ ಹಿಂದೆ ಭಾರತಕ್ಕೆ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿರಲಿಲ್ಲ. ಮೊದಲ ಬಾರಿಗೆ ಈ ಅವಕಾಶದ ದೊರೆತಿದೆ ಎಂದರು.

ಇದನ್ನೂ ಓದಿ:ಅಮ್ಮ ಹೀರಾಬೆನ್​ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ABOUT THE AUTHOR

...view details