ಪುರಿ:ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಥೀಮ್ ಲೋಗೋವನ್ನು ಪ್ರಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಆಕರ್ಷಕವಾಗಿ ಮೂಡಿಸಿದ್ದಾರೆ. ಕೊನಾರ್ಕ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಉತ್ಸವದಲ್ಲಿ ಅವರ ಕಲೆ ಅನಾವರಣಗೊಂಡಿದೆ. ಎರಡು ದಿನಗಳ ಕಾಲ ಶ್ರಮಿಸಿ ವಿದ್ಯಾರ್ಥಿಗಳೊಂದಿಗೆ ಜಿ 20 ಲೋಗೋ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಟ್ನಾಯಕ್, 'ವಸುಧೈವ ಕುಟುಂಬಕಂ ಎಂಬ ಸಂದೇಶ ಸಾವಿರಾರು ವರ್ಷಗಳ ನಮ್ಮ ಪ್ರಾಚೀನ ಜ್ಞಾನ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಭಾರತೀಯರಿಗೆಲ್ಲ ತಿಳಿದಿರುವ, ಪ್ರಾಚೀನ ಜ್ಞಾನವನ್ನು ಜಿ 20 ಶೃಂಗಸಭೆಯ ಮೂಲಕ ಪ್ರಪಂಚಕ್ಕೆ ಪರಿಚಯಿಸುತ್ತಿದ್ದೇವೆ' ಎಂದರು.