ಕರ್ನಾಟಕ

karnataka

ETV Bharat / bharat

G-20 ಸಭೆ ನಿರ್ಣಯದಲ್ಲಿ 'ಉಕ್ರೇನ್ ಬಿಕ್ಕಟ್ಟು' ಉಲ್ಲೇಖ: ರಷ್ಯಾ, ಚೀನಾ ಆಕ್ಷೇಪ! - ಜಿ 20 ನಾಯಕರ ಸಭೆ

ಜಿ 20 ನಾಯಕರ ಸಭೆಯ ಫಲಿತಾಂಶದ ದಾಖಲೆಯಲ್ಲಿ ಉಕ್ರೇನ್ ಸಂಘರ್ಷದ ಪ್ರಸ್ತಾಪವನ್ನು ರಷ್ಯಾ ಮತ್ತು ಚೀನಾ ಮತ್ತೊಮ್ಮೆ ವಿರೋಧಿಸಿವೆ.

G 20
ಜಿ20

By

Published : Jun 13, 2023, 2:27 PM IST

ನವದೆಹಲಿ:ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿರುವ ಕಾರಣ ವಾರಾಣಸಿಯಲ್ಲಿ ನಡೆದ ಜಿ 20 ನಾಯಕರ ಸಭೆಯ ಸಾಮಾನ್ಯ ಫಲಿತಾಂಶದ ದಾಖಲೆಯಿಂದ ರಷ್ಯಾ ತನ್ನನ್ನು ತಾನು ಬೇರ್ಪಡಿಸಿಕೊಂಡಿದೆ. ಚೀನಾ ಕೂಡ ಸಭೆಯ ಫಲಿತಾಂಶವು ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಯಾವುದೇ ಉಲ್ಲೇಖವನ್ನು ಒಳಗೊಂಡಿರಬಾರದು ಎಂದು ಹೇಳಿದೆ.

ಜಿ 20 ನಾಯಕರ ಸಭೆ ಸೋಮವಾರ ವಿದೇಶಾಂಗ ಸಚಿವ ಡಾ. ಎಸ್​.ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ವಾರಾಣಸಿಯಲ್ಲಿ ನಡೆಯಿತು. ಸುಮಾರು 200 ವಿದೇಶಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆ ಕಾಪಾಡುವ ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿಹಿಡಿಯುವುದು ಅತ್ಯಗತ್ಯ ಎಂದು ಫಲಿತಾಂಶದ ದಾಖಲೆಯು ಹೇಳಿದೆ. "ಇದು ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಪ್ರತಿಪಾದಿಸಲಾದ ಎಲ್ಲಾ ಉದ್ದೇಶಗಳು ಮತ್ತು ತತ್ವಗಳನ್ನು ರಕ್ಷಿಸುವುದು ಮತ್ತು ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆ ಮತ್ತು ಮೂಲಸೌಕರ್ಯ ಸೇರಿದಂತೆ ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರುವುದನ್ನು ಒಳಗೊಂಡಿದೆ".

ನಿರ್ಣಯದಲ್ಲಿ ಏನೇನಿದೆ?:'14 ಪ್ಯಾರಾಗಳನ್ನು ಒಳಗೊಂಡಿರುವ ಸಾಮಾನ್ಯ ಫಲಿತಾಂಶದ ದಾಖಲೆಯು 'ಎಲ್ಲಾ G 20 ನಾಯಕರು ಪ್ಯಾರಾಗ್ರಾಫ್ 1 ರಿಂದ 9 ಮತ್ತು ಪ್ಯಾರಾಗ್ರಾಫ್ 12 ರಿಂದ 14 ಕ್ಕೆ ಒಪ್ಪಿಕೊಂಡಿದ್ದಾರೆ' ಎಂಬ ಟಿಪ್ಪಣಿಯೊಂದಿಗೆ ಬಿಡುಗಡೆಯಾಯಿತು. ಇದಲ್ಲದೇ ಡಾಕ್ಯುಮೆಂಟ್‌ನ ಅಡಿ ಟಿಪ್ಪಣಿಯು 'ರಷ್ಯಾ ಈ ಸ್ಥಿತಿಯಿಂದ ತನ್ನನ್ನು ತಾನು ಬೇರ್ಪಡಿಸಿಕೊಂಡಿದೆ.

ಡಾಕ್ಯುಮೆಂಟ್‌ನ ಪ್ಯಾರಾ 10 ಮತ್ತು 11ರಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಲಾಗಿದೆ. ಉಕ್ರೇನ್‌ನಲ್ಲಿನ ಯುದ್ಧವು ಜಾಗತಿಕ ಆರ್ಥಿಕತೆಯ ಮೇಲೆ ಮತ್ತಷ್ಟು ಪ್ರತಿಕೂಲ ಪರಿಣಾಮ ಬೀರಿದೆ ಎಂಬ ವಿಷಯದ ಬಗ್ಗೆ ಚರ್ಚೆ ನಡಸಲಾಯಿತು. ಅಮೆರಿಕ ಸೆಕ್ಯುರಿಟಿ ಕೌನ್ಸಿಲ್ ಮತ್ತು ಅಮೆರಿಕನ್​ ಜನರಲ್ ಅಸೆಂಬ್ಲಿ ಸೇರಿದಂತೆ ಇತರ ವೇದಿಕೆಗಳಲ್ಲಿ ವ್ಯಕ್ತಪಡಿಸಿದಂತೆ ನಾವು ನಮ್ಮ ರಾಷ್ಟ್ರೀಯ ನಿಲುವುಗಳನ್ನು ಪುನರುಚ್ಚರಿಸಿದ್ದೇವೆ.

ಇದು 2 ಮಾರ್ಚ್ 2022 ರ ನಿರ್ಣಯ ಸಂಖ್ಯೆ ES11/1 ರಲ್ಲಿ ಬಹುಮತದ ಮತದಿಂದ ಅಂಗೀಕರಿಸಲ್ಪಟ್ಟಂತೆ (141 ಮತಗಳು, 5 ವಿರುದ್ಧ, 35 ಗೈರು ಹಾಜರಿ, 12 ಗೈರು) ಉಕ್ರೇನ್ ವಿರುದ್ಧ ರಷ್ಯಾದ ಒಕ್ಕೂಟದ ಆಕ್ರಮಣವನ್ನು ಪ್ರಬಲವಾಗಿ ಖಂಡಿಸುತ್ತದೆ ಮತ್ತು ಉಕ್ರೇನ್ ಪ್ರದೇಶದಿಂದ ಬೇಷರತ್ತಾದ ವಾಪಸಾತಿಗೆ ಒತ್ತಾಯಿಸುತ್ತದೆ" ಎಂದು ಫಲಿತಾಂಶದ ದಾಖಲೆಯ 10 ನೇ ಪ್ಯಾರಾದಲ್ಲಿ ಹೇಳಲಾಗಿದೆ.

"ಪರಿಸ್ಥಿತಿ ಮತ್ತು ನಿರ್ಬಂಧಗಳ ಇತರ ದೃಷ್ಟಿಕೋನಗಳು ಮತ್ತು ವಿಭಿನ್ನ ಮೌಲ್ಯಮಾಪನಗಳು ಇದ್ದವು. G 20 ಭದ್ರತಾ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಲ್ಲ ಎಂದು ಗುರುತಿಸಿ, ಭದ್ರತಾ ಸಮಸ್ಯೆಗಳು ಜಾಗತಿಕ ಆರ್ಥಿಕತೆಗೆ ಗಮನಾರ್ಹ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ" ಎಂದು ಅದು ಹೇಳಿದೆ.

"ಪ್ಯಾರಾಗ್ರಾಫ್ 11 ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬೆದರಿಕೆಯನ್ನು ಸ್ವೀಕಾರಾರ್ಹವಲ್ಲ ಮತ್ತು "ಘರ್ಷಣೆಗಳಿಗಿಂತ ಶಾಂತಿಯುತ ಪರಿಹಾರ, ಬಿಕ್ಕಟ್ಟುಗಳನ್ನು ಪರಿಹರಿಸುವ ಪ್ರಯತ್ನಗಳು, ಹಾಗೆಯೇ ರಾಜತಾಂತ್ರಿಕತೆ ಮತ್ತು ಸಂವಾದಗಳು ಅತ್ಯಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಂದಿನ ಯುಗವು ಯುದ್ಧವಾಗಿರಬಾರದು ಎಂದು ದಾಖಲೆಯ ಮತ್ತೊಂದು ಅಡಿಟಿಪ್ಪಣಿಯಲ್ಲಿ ಹೇಳಲಾಗಿದೆ. ಆದರೆ ಸಭೆಯ ಫಲಿತಾಂಶವು ಉಕ್ರೇನ್ ಬಿಕ್ಕಟ್ಟಿನ ಯಾವುದೇ ಉಲ್ಲೇಖವನ್ನು ಒಳಗೊಂಡಿರಬಾರದು ಎಂದು ಚೀನಾ ಹೇಳಿದೆ.

ಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು (LDCs) ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳು (SIDS) ) ಅಂತರಾಷ್ಟ್ರೀಯ ಸಹಕಾರ, ಬಹುಪಕ್ಷೀಯತೆ ಮತ್ತು ಜಾಗತಿಕ ಐಕಮತ್ಯ ಜಗತ್ತಿಗೆ ಉತ್ತಮ ಮಾರ್ಗವೆಂದು ಅಚಲ ಬದ್ಧತೆಯನ್ನು ಪುನರುಚ್ಚರಿಸಲಾಯಿತು.

ಇದನ್ನೂ ಓದಿ:ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ ಮಾಡಿದ G20 ಸದಸ್ಯರು

ABOUT THE AUTHOR

...view details