ಕರ್ನಾಟಕ

karnataka

ETV Bharat / bharat

ಹರಿಯಾಣ ಹಳ್ಳಿಯಲ್ಲಿದ್ದಾರೆ ಭವಿಷ್ಯದ ಬಾಸ್ಕೆಟ್​​​ಬಾಲ್​ ಸ್ಟಾರ್​​ಗಳು: ಕ್ರೀಡೆಯಿಂದಲೇ ಹೆಸರಾಗಿದೆ ಗ್ರಾಮ

ಅಹರ್ ಗ್ರಾಮವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಹೊಂದಿದೆ. ದೇಶಕ್ಕಾಗಿ ಬಾಸ್ಕೆಟ್‌ಬಾಲ್ ಆಡಿ, ಭಾರತೀಯ ಸೇನೆ ಸೇರಿದ ಅನೇಕ ಯುವಕರಲ್ಲಿ ಹೆಚ್ಚಿನವರು ಈ ಗ್ರಾಮದವರೇ. ಹೆಸರಾಂತ ಕ್ರೀಡಾಪಟುಗಳನ್ನು ಹೊಂದಿರುವುದಕ್ಕೆ ಈ ಗ್ರಾಮವು ಹೆಮ್ಮೆ ಪಡುತ್ತದೆ.

future-basketball-stars-are-in-the-village-of-haryana
ಹರಿಯಾಣ ಹಳ್ಳಿಯಲ್ಲಿದ್ದಾರೆ ಭವಿಷ್ಯದ ಬಾಸ್ಕೆಟ್​​​ಬಾಲ್​ ಸ್ಟಾರ್​​ಗಳು

By

Published : Mar 5, 2021, 6:02 AM IST

ಹರಿಯಾಣ: ಕ್ರೀಡಾ ಲೋಕಕ್ಕೆ ಪ್ರತಿಭೆಗಳನ್ನು ನೀಡಿದ ಖ್ಯಾತಿ ಹರಿಯಾಣ ರಾಜ್ಯಕ್ಕೆ ಸಲ್ಲುತ್ತದೆ. ಈ ರಾಜ್ಯದ ಹೆಚ್ಚಿನ ಯುವಕರು ಉದ್ಯೋಗ ಪಡೆದಿರುವುದು ಕ್ರೀಡೆಯಿಂದಲೇ. ಹರಿಯಾಣ ಫುಟ್‌ಬಾಲ್‌ಗೆ, ಬಾಕ್ಸಿಂಗ್‌ ಮತ್ತು ಕಬಡ್ಡಿ ಕ್ಷೇತ್ರಗಳಲ್ಲಿ ಸಾಧನೆಗೈದ ಖ್ಯಾತ ಕ್ರೀಡಾಪಟುಗಳನ್ನು ಹೊಂದಿದೆ.

ಬಾಸ್ಕೆಟ್‌ಬಾಲ್​ನಲ್ಲಿ ಸಹ ಹರಿಯಾಣ ಯುವಕರು ಸಾಧನೆಗೈದಿದ್ದಾರೆ. ಪಾಣಿಪತ್‌ನಿಂದ 28 ಕಿ.ಮೀ ದೂರದಲ್ಲಿರುವ ಅಹರ್ ಎಂಬ ಹಳ್ಳಿಯು ರಾಷ್ಟ್ರಮಟ್ಟದ ಅನೇಕ ಆಟಗಾರರನ್ನು ಹೊಂದಿದೆ. ಇಲ್ಲಿನ ಹೆಚ್ಚಿನ ಯುವಕರು ಬಾಸ್ಕೆಟ್‌ಬಾಲ್ ಆಡಲು ಆಸಕ್ತಿ ಹೊಂದಿದ್ದಾರೆ ಮತ್ತು ಅವರು ವಿವಿಧ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿ, ಸರ್ಕಾರಿ ಉದ್ಯೋಗವನ್ನು ಪಡೆದಿದ್ದಾರೆ.

ಗ್ರಾಮವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಹೊಂದಿದೆ. ದೇಶಕ್ಕಾಗಿ ಬಾಸ್ಕೆಟ್‌ಬಾಲ್ ಆಡಿ, ಭಾರತೀಯ ಸೇನೆ ಸೇರಿದ ಅನೇಕ ಯುವಕರಲ್ಲಿ ಹೆಚ್ಚಿನವರು ಈ ಗ್ರಾಮದವರೇ. ಹೆಸರಾಂತ ಕ್ರೀಡಾಪಟುಗಳನ್ನು ಹೊಂಡಿರುವುದಕ್ಕೆ ಈ ಗ್ರಾಮವು ಹೆಮ್ಮೆ ಪಡುತ್ತದೆ.

ಹರಿಯಾಣ ಹಳ್ಳಿಯಲ್ಲಿದ್ದಾರೆ ಭವಿಷ್ಯದ ಬಾಸ್ಕೆಟ್​​​ಬಾಲ್​ ಸ್ಟಾರ್​​ಗಳು

ಬಾಸ್ಕೆಟ್‌ಬಾಲ್ ಜತೆ ಈ ಹಳ್ಳಿಗೆ ವಿಶೇಷವಾದ ನಂಟಿದೆ. ಇಲ್ಲಿನ ಅನೇಕ ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಗೆಲ್ಲಲು ಆರಂಭಿಸಿದರು. ಆಗ ಇಲ್ಲಿ ಹೊಸ ಪದ್ಧತಿಯೊಂದನ್ನು ಪ್ರಾರಂಭಿಸಲಾಯಿತು. ಆ ಪದ್ಧತಿಯೇ 'ಪೀಲಿಯಾ'. ಇದು ಈಗ ಒಂದು ಸಂಪ್ರದಾಯವಾಗಿ ಮಾರ್ಪಟ್ಟಿದೆ. ಪೀಲಿಯಾ ಆಚರಣೆ ವೇಳೆ ಚಿಕ್ಕ ಮಕ್ಕಳಿಗೆ ಹಿರಿಯರು ಬಾಸ್ಕೆಟ್​ ಬಾಲ್​ ಅನ್ನು ಉಡುಗೊರೆಯಾಗಿ ನೀಡುವುದು ವಾಡಿಕೆ.

ಈ ಗ್ರಾಮದಲ್ಲಿ ಸುಮಾರು 6 ಬ್ಯಾಸ್ಕೆಟ್‌ಬಾಲ್ ಮೈದಾನಗಳಿವೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಈ ಮೈದಾನಗಳಲ್ಲಿ ತರಬೇತಿ ನೀಡಲಾಗುತ್ತದೆ. ಮೂರು ತರಬೇತುದಾರರನ್ನು ಸಹ ಇಲ್ಲಿ ನೇಮಿಸಲಾಗಿದೆ. ಗ್ರಾಮದಲ್ಲಿ ಬಾಸ್ಕೆಟ್‌ಬಾಲ್ ಆಟಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತದೆ. ಈ ಹಳ್ಳಿಯ ಅನೇಕ ಆಟಗಾರರು ಭಾರತೀಯ ಬಾಸ್ಕೆಟ್​ ಬಾಲ್​ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

ಬಾಸ್ಕೆಟ್‌ಬಾಲ್ ಕ್ಷೇತ್ರದಲ್ಲಿ ಈ ಹಳ್ಳಿಯ ಜನರ ಕೊಡುಗೆ ಅಪಾರ. ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಹ ಇಲ್ಲಿನ ಕ್ರೀಡಾಪಟುಗಳು ಮಿಂಚಿದ್ದಾರೆ. ಸರ್ಕಾರ, ವಿಶೇಷವಾಗಿ ಕ್ರೀಡಾ ಇಲಾಖೆ ಈ ಹಳ್ಳಿಯ ಬಗ್ಗೆ ಸ್ವಲ್ಪ ಗಮನ ಹರಿಸಿದರೆ, ಹಲವಾರು ಪ್ರಸಿದ್ಧ ಬಾಸ್ಕೆಟ್‌ಬಾಲ್ ಆಟಗಾರರು ಮುಂಚೂಣಿಗೆ ಬರಲು ಸಾಧ್ಯ.

ABOUT THE AUTHOR

...view details