ಕರ್ನಾಟಕ

karnataka

ETV Bharat / bharat

ಉನ್ನಾವೋ ಬಾಲಕಿಯರ ಪತ್ತೆ ಪ್ರಕರಣ: ಪೊಲೀಸ್​ ಬಂದೋಬಸ್ತ್​ನಲ್ಲಿ ಇಬ್ಬರ ಹುಡುಗಿಯರ ಅಂತ್ಯಕ್ರಿಯೆ!

ಉನ್ನಾವೋ ಬಾಲಕಿಯರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕಿಯರ ಅಂತ್ಯಕ್ರಿಯೆ ಭಾರಿ ಪೊಲೀಸ್​ ಬಂದೋಬಸ್ತ್​ನಲ್ಲಿ ಜರುಗಿಸಲಾಯಿತು.

today the funeral of both girls dead body in unnao case  today the funeral of both girls dead body  unnao case  unnao news  unnao today news  ಇಬ್ಬರು ಬಾಲಕಿಯರ ಅತ್ಯಂಕ್ರಿಯೆ  ಉನ್ನಾವೋದಲ್ಲಿ ಇಬ್ಬರು ಬಾಲಕಿಯರ ಅತ್ಯಂಕ್ರಿಯೆ  ಉನ್ನಾವೋ 3 ಬಾಲಕಿಯರು ಪತ್ತೆ ಪ್ರಕರಣ  ಉನ್ನಾವೋ ಮೂವರು ಬಾಲಕಿಯರು ಪತ್ತೆ ಪ್ರಕರಣ ಸುದ್ದಿ
ಪೊಲೀಸ್​ ಬಂದೋಬಸ್ತ್​ನಲ್ಲಿ ಇಬ್ಬರ ಹುಡುಗಿಯರ ಅಂತ್ಯಕ್ರಿಯೆ

By

Published : Feb 19, 2021, 11:39 AM IST

ಉನ್ನಾವೋ:ಇಲ್ಲಿನ ಹೊಲವೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಮೂವರು ಬಾಲಕಿಯರು ಪೋಷಕರಿಗೆ ದೊರೆತ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಅವರಿಬ್ಬರ ಅಂತ್ಯಕ್ರಿಯೆ ಭಾರಿ ಪೊಲೀಸ್​ ಬಿಗಿ ಬಂದೋಬಸ್ತ್​ನಲ್ಲಿ ನಡೆಯಿತು.

ಪೊಲೀಸ್​ ಬಂದೋಬಸ್ತ್​ನಲ್ಲಿ ಇಬ್ಬರ ಹುಡುಗಿಯರ ಅಂತ್ಯಕ್ರಿಯೆ

ಜಿಲ್ಲೆಯ ಅಸೋಹಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯರಲ್ಲಿ ಇಬ್ಬರು ಬುಧವಾರ ರಾತ್ರಿಯೇ ಮೃತಪಟ್ಟಿದ್ದರು. ಅದೇ ಸಮಯದಲ್ಲಿ, ಕಾನ್ಪುರದ ರೀಜೆನ್ಸಿ ಆಸ್ಪತ್ರೆಯಲ್ಲಿ ಮೂರನೇ ಬಾಲಕಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಮೂವರು ಹುಡುಗಿಯರು ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇಬ್ಬರು ಹುಡುಗಿಯರ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯ ಸಮಯದಲ್ಲಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವಿಗೆ ಡಿಜಿಪಿ ಹಿತೇಶ್ ಚಂದ್ರ ಅವಸ್ಥಿ ಪ್ರತಿಕ್ರಿಯಿಸಿದ್ದಾರೆ.

ಇಬ್ಬರು ಬಾಲಕಿಯರ ದೇಹದ ಮೇಲೆ ಯಾವುದೇ ಗಾಯದ ಲಕ್ಷಣಗಳು ಕಂಡುಬಂದಿಲ್ಲ. ಮರಣೋತ್ತರ ವರದಿಯಲ್ಲಿ ಸಾವಿನ ಕಾರಣ ದೃಢಪಟ್ಟಿಲ್ಲ. ಮೃತ ಬಾಲಕಿಯರ ಅಂಗಗಳನ್ನು ರಾಸಾಯನಿಕ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಬಾಲಕಿಯರು ವಿಷ ಸೇವನೆಯಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಅಂತಾ ಡಿಜಿಪಿ ತಿಳಿಸಿದ್ದಾರೆ.

ಕುಟುಂಬಸ್ಥರ ಆಧಾರ ಮೇಲೆ ಎಫ್​ಐಆರ್​ ದಾಖಲಿಸಲಾಗಿದ್ದು, ಘಟನೆಯ ತನಿಖೆಗಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹಿರಿಯ ಅಧಿಕಾರಿಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಡಿಜಿಪಿ ಹೇಳಿದರು.

ABOUT THE AUTHOR

...view details