ಕರ್ನಾಟಕ

karnataka

ETV Bharat / bharat

ಹಿಂದೂಯೇತರ ವ್ಯಕ್ತಿಯ ಮದುವೆಯಾದ ಯುವತಿ.. ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿದ ಕುಟುಂಬಸ್ಥರು! - ಬದುಕಿರುವಾಗಲೇ ಪಿಂಡ ಪ್ರದಾನ

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಅನ್ಯಧರ್ಮೀಯ ಯುವಕನೊಂದಿಗೆ ಮದುವೆಯಾದ ಮಗಳಿಗೆ ಕುಟುಂಬಸ್ಥರು ನದಿಯ ತೀರದಲ್ಲಿ ಪಿಂಡ ಪ್ರದಾನ ನೆರವೇರಿಸಿದ್ದಾರೆ.

Funeral held for girl for marrying nonHindu at Madhya Pradeshs Jabalpur
ಹಿಂದೂಯೇತರ ವ್ಯಕ್ತಿಯ ಮದುವೆಯಾದ ಯುವತಿ... ಬದುಕಿರುವಾಗಲೇ ಪಿಂಡ ಪ್ರದಾನ ಮಾಡಿದ ಕುಟುಂಬಸ್ಥರು

By

Published : Jun 12, 2023, 6:39 PM IST

Updated : Jun 12, 2023, 6:50 PM IST

ಜಬಲ್ಪುರ್ (ಮಧ್ಯಪ್ರದೇಶ): ಹಿಂದೂಯೇತರ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಜೀವಂತವಾಗಿರುವ ಮಗಳಿಗೆ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿ ಪಿಂಡ ಪ್ರದಾನ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ನರ್ಮದಾ ತೀರದಲ್ಲಿರುವ ಗೌರಿಘಾಟ್‌ನಲ್ಲಿ ಕುಟುಂಬಸ್ಥರು ಸಂಪೂರ್ಣ ವಿಧಿವಿಧಾನಗಳೊಂದಿಗೆ ಪಿಂಡ ಪ್ರದಾನ ಮಾಡಿದ್ದಾರೆ.

ಇಲ್ಲಿನ ಅಮ್ಖೇರಾ ಪ್ರದೇಶದ ಅನಾಮಿಕಾ ದುಬೆ ಎಂಬ ಯುವತಿ ಅನ್ಯ ಧರ್ಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಪೋಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೂ, ಇದ್ಯಾವುದಕ್ಕೂ ಒಪ್ಪದ ಯುವತಿ ನ್ಯಾಯಾಲಯದ ಮೊರೆ ಹೋಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಆ ವ್ಯಕ್ತಿಯನ್ನೇ ಮದುವೆಯಾಗಿದ್ದಾಳೆ.

ಇದನ್ನೂ ಓದಿ:Boyfriend Murdered Girlfriend: 7 ವರ್ಷದ ಪ್ರೀತಿ, ಮದುವೆ ವಿಷ್ಯ ಬಂದಾಗ ಪ್ರೇಯಸಿಯ ಕೊಲೆ.. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವ ಎಸೆದ ಪ್ರೇಮಿ ಅರೆಸ್ಟ್​!

ಜೂನ್ 7ರಂದು ಅನಾಮಿಕಾ ದುಬೆ ಮುಸ್ಲಿಂ ಪದ್ಧತಿಗಳನ್ನು ಅನುಸರಿಸಿ, ತನ್ನ ಹೆಸರನ್ನು ಉಜ್ಮಾ ಫಾತಿಮಾ ಎಂದೂ ಬದಲಾಯಿಸಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ತಮ್ಮ ಪಾಲಿಗೆ ಅನಾಮಿಕಾ ಇನ್ನಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅನಾಮಿಕಾಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಆದರೆ, ಬೇರೆ ಯುವಕನೊಂದಿಗೆ ಮದುವೆಯಾಗಿ ಇಡೀ ಕುಟುಂಬದ ಮಾನವನ್ನು ಹಾಳು ಮಾಡಿದ್ದಾಳೆ. ಹೀಗಾಗಿ ಆಕೆ ಇನ್ನು ಬದುಕಿದ್ದಾಳೆ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.

ನರ್ಮದಾ ತೀರದಲ್ಲಿ ಪಿಂಡ ಪ್ರದಾನ:ಇಡೀ ಕುಟುಂಬ, ಬಂಧು ಬಳಗ ಎಲ್ಲರನ್ನೂ ಧಿಕ್ಕರಿಸಿ ಹಿಂದೂಯೇತರ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಅನಾಮಿಕಾ ದುಬೆ ವಿರುದ್ಧ ಸಾಕಷ್ಟು ಅಸಮಾಧಾನಗೊಂಡಿರುವ ಆಕೆಯ ಕುಟುಂಬ ಸದಸ್ಯರು ಭಾನುವಾರ ನರ್ಮದಾ ನದಿಯ ದಡದಲ್ಲಿರುವ ಗೌರಿಘಾಟ್‌ನಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ. ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಗೌರಿಘಾಟ್‌ನಲ್ಲಿ ಜಮಾಯಿಸಿ ಅವರ ಸಂಬಂಧಿಕರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಸಂತಾಪ ಪತ್ರ ಮುದ್ರಣ:ಅಷ್ಟೇ ಅಲ್ಲ, ಆಕೆಯ ನಿಧನದ ಬಗ್ಗೆ ಸಂತಾಪ ಪತ್ರವನ್ನೂ ಸಹ ಮುದ್ರಿಸಲಾಗಿದೆ. ಅದನ್ನು ಕುಟುಂಬಸ್ಥರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರಿಗೆ ಕಳುಹಿಸಿದ್ದಾರೆ. ಈ ಮೂಲಕ ನರ್ಮದಾ ನದಿಯ ದಡದಲ್ಲಿ ಪಿಂಡ ಪ್ರದಾನದಲ್ಲಿ ಭಾಗವಹಿಸುವಂತೆ ನೀಡಿದ್ದಾರೆ. ಈ ಬಗ್ಗೆ ಅನಾಮಿಕಾ ದುಬೆ ಸಹೋದರ ಅಭಿಷೇಕ್ ದುಬೆ ಮಾತನಾಡಿ, ನಮ್ಮ ಸಹೋದರಿಯ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿದ್ದೆವು. ಆದರೆ, ಆಕೆಯ ಹಠಮಾರಿತನವು ಕುಟುಂಬದ ಎಲ್ಲರ ಆಕಾಂಕ್ಷೆಗಳನ್ನು ನುಚ್ಚು ನೂರು ಮಾಡಿದೆ. ಆಕೆ ಬದುಕಿರುವಾಗಲೇ ಪಿಂಡ ಪ್ರದಾನ ಮಾಡಬೇಕಾದ ದಿನಗಳನ್ನು ನೋಡಬೇಕೆಂದು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅನ್ಯ ಜಾತಿ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಸೊಸೆಯನ್ನೇ ಕೊಂದ

Last Updated : Jun 12, 2023, 6:50 PM IST

ABOUT THE AUTHOR

...view details