ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆಯುತ್ತಿದೆ. ನವದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರವಾಗುತ್ತಿದೆ.
ಈಗ ಸಿಂಘು ಗಡಿಯ ಬಳಿಯಲ್ಲಿ ಓರ್ವ ರೈತ ಮನೆಯೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾನೆ. ಸಂಯುಕ್ತ್ ಕಿಸಾನ್ ಮೋರ್ಚಾದ ಕೇಂದ್ರ ಕಚೇರಿ ಬಳಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ:GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್.. ಚರ್ಚೆಗೆ ಕೇಂದ್ರ ಮುಕ್ತ; ಅನುರಾಗ ಠಾಕೂರ್
ಈಗಾಗಲೇ ಸ್ಥಳಕ್ಕೆ ಇಟ್ಟಿಗೆ, ಸಿಮೆಂಟ್, ಮುಂತಾದ ಸಾಮಗ್ರಿಗಳನ್ನು ತರಲಾಗಿದೆ. ಅಡಿಪಾಯ ಹಾಕುವ ಕಾರ್ಯ ಪ್ರಾರಂಭವಾಗಿದೆ. ಎರಡು ಅಂತಸ್ತಿನ ಹವಾನಿಯಂತ್ರಿತ ಮನೆಯನ್ನು ನಿರ್ಮಾಣ ಮಾಡಲು ರೈತ ನಿರ್ಧರಿಸಿದ್ದಾನೆ.
ರೈತ ಮನೆ ನಿರ್ಮಾಣಕ್ಕೆ ಮುಂದಾಗಿರುವ ವಿಡಿಯೋವನ್ನು ದೀಪ್ ಖಾತ್ರಿ ಎಂಬ ದೆಹಲಿಯ ನರೇಲಾ ನಿವಾಸಿ ಮಾಡಿದ್ದು, ಭಗತ್ ಸಿಂಗ್ ಯೂಥ್ ಬ್ರಿಗೇಡ್ ಎಂಬ ಸಾಮಾಜಿಕ ಸಂಘಟನೆಯನ್ನು ನಡೆಸುತ್ತಿದ್ದಾರೆ.
ದೀಪ್ ಖಾತ್ರಿ ಸಂಯುಕ್ತ್ ಕಿಸಾನ್ ಮೋರ್ಚಾದೊಂದಿಗೆ ಗುರುತಿಸಿಕೊಂಡಿದ್ದು, ಹಿಂದಿನ ವರ್ಷ ಪ್ರತಿಭಟನೆ ಆರಂಭವಾದಾಗಿನಿಂದ ರೈತರಿಗೆ ಸಾಥ್ ನೀಡುತ್ತಿದ್ದಾರೆ.