ಕರ್ನಾಟಕ

karnataka

ETV Bharat / bharat

ಕೋವಿಡ್​ ತಡೆಗೆ 'ಸಂಪೂರ್ಣ ಲಾಕ್​ಡೌನ್​' ಏಕೈಕ ಮಾರ್ಗ: ರಾಹುಲ್‌ ಗಾಂಧಿ

ವೈರಸ್​ ಹತ್ತಿಕ್ಕಲು ಇರುವ ಏಕೈಕ ಮಾರ್ಗವೆಂದರೆ ಅದರು ಸಂಪೂರ್ಣ ಲಾಕ್‌ಡೌನ್. ದುರ್ಬಲ ವರ್ಗದ ಜನರಿಗೆ ನ್ಯಾಯ್ ಯೋಜನೆಯ ಭರವಸೆ ನೀಡಿ ಲಾಕ್​ಡೌನ್​ ಮಾಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

Rahul Gandhi
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

By

Published : May 4, 2021, 11:39 AM IST

ನವದೆಹಲಿ: ದೇಶದಲ್ಲಿ ಕೋವಿಡ್​ ಸಾವು-ನೋವು ಹೆಚ್ಚುತ್ತಿದ್ದರೂ ಕಠಿಣ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಸೋಂಕು ಹರಡುವಿಕೆ ತಡೆಗಟ್ಟಲು ಇರುವುದು 'ಸಂಪೂರ್ಣ ಲಾಕ್​ಡೌನ್​' ಒಂದೇ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ.

"ಭಾರತ ಸರ್ಕಾರದ ನಿಷ್ಕ್ರಿಯತೆಯು ಅನೇಕ ಮುಗ್ಧ ಜನರನ್ನು ಕೊಲ್ಲುತ್ತಿದೆ. ವೈರಸ್​ ಹತ್ತಿಕ್ಕಲು ಇರುವ ಏಕೈಕ ಮಾರ್ಗವೆಂದರೆ ಅದರು ಸಂಪೂರ್ಣ ಲಾಕ್‌ಡೌನ್. ಇದು ಸರ್ಕಾರಕ್ಕೆ ಇನ್ನೂ ಅರ್ಥವಾಗುತ್ತಿಲ್ಲ. ದುರ್ಬಲ ವರ್ಗದ ಜನರಿಗೆ ನ್ಯಾಯ್ ಯೋಜನೆಯ ಭರವಸೆ ನೀಡಿ ಲಾಕ್​ಡೌನ್​ ಮಾಡಬೇಕು" ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಕಳೆದ ತಿಂಗಳು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಅನ್ನು ಕೊನೆಯ ಆಯ್ಕೆಯಾಗಿ ಮಾತ್ರ ಬಳಸಬೇಕು ಎಂದು ಹೇಳಿದ್ದರು. ಆದರೆ ಪ್ರತಿನಿತ್ಯ ಮೂರು ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಮೂರು ಸಾವಿರಕ್ಕೂ ಹೆಚ್ಚು ಮಂದಿ ವೈರಸ್​ನಿಂದ ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಕೋವಿಡ್ ಹರಡುವಿಕೆ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ಹಂತ ಹಂತವಾಗಿ ರಾಷ್ಟ್ರವ್ಯಾಪಿ ಲಾಕ್​ಡೌನ್ ಅನಿವಾರ್ಯವಾಗಿದ್ದು, ಸದ್ಯಕ್ಕೆ ಕನಿಷ್ಠ ಎರಡು ವಾರಗಳ ಕಾಲ ಲಾಕ್‌ಡೌನ್ ವಿಧಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ದೇಶದ ಆರೋಗ್ಯ ರಕ್ಷಣಾ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೋವಿಡ್​ ಕೇಸ್​.. ಒಂದೇ ದಿನ 3,449 ಮಂದಿ ಬಲಿ

ಏನಿದು ನ್ಯಾಯ್ (NYAY)​ ಯೋಜನೆ?

ನ್ಯಾಯ್, ಇದು ದೇಶದ ದುರ್ಬಲ ವರ್ಗದ ಜನರಿಗೆ ಆರ್ಥಿಕ ಸಹಾಯ ಒದಗಿಸುವ, ಕನಿಷ್ಠ ಬೆಂಬಲ ನೀಡುವ ಯೋಜನೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದೆ. ಈ ಯೋಜನೆಯಡಿ ಸುಮಾರು 5 ಕೋಟಿ ಭಾರತೀಯ ಕುಟುಂಬಗಳ ಖಾತೆಗೆ ನೇರವಾಗಿ ವಾರ್ಷಿಕ 72,000 ರೂ. ಅಥವಾ ತಿಂಗಳಿಗೆ 6,000 ರೂ. ಹಣ ಜಮೆ ಮಾಡಲಾಗುವುದು.

ABOUT THE AUTHOR

...view details