ನವದೆಹಲಿ:ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಆರೋಪ ಹೊತ್ತುತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತನ್ನನ್ನು ಮತ್ತೆ ಅಪಹರಿಸಿ ಗಯಾನಾಕ್ಕೆ ಕರೆದೊಯ್ಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚೋಕ್ಸಿ, ನನ್ನನ್ನು ಮತ್ತೊಮ್ಮೆ ಬಲವಂತವಾಗಿ ಅಪಹರಿಸಬಹುದು ಮತ್ತು ಅಲ್ಲಿ ಭಾರತದ ಉಪಸ್ಥಿತಿ ಇರಬಹುದು. ಸದ್ಯ ನಾನು ಆಂಟಿಗುವಾದಲ್ಲಿರುವ ನನ್ನ ಮನೆಗಷ್ಟೇ ಸೀಮಿತವಾಗಿದ್ದೇನೆ. ನನ್ನ ಆರೋಗ್ಯ ಹದಗೆಟ್ಟಿರುವುದರಿಂದ ಬೇರೆ ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸೆರೆಯಾಳುಗಳ ಕೈಯಲ್ಲಿ ನಾನು ಅನುಭವಿಸಿದ ನೋವು ನನ್ನ ಅವನತಿಗೆ ಕಾರಣವಾಯಿತು ಎಂದು ಚೋಕ್ಸಿ ಆರೋಪಿಸಿದ್ದಾರೆ.
ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿರುವ ಚೋಕ್ಸಿ, ಕಳೆದ ಕೆಲವು ತಿಂಗಳುಗಳಲ್ಲಿ ನನ್ನ ಮಾನಸಿಕ ಆರೋಗ್ಯ ತೀರಾ ಹದಗೆಟ್ಟಿದೆ. ನನಗೆ ನಡೆದಾಡಲು ಕೂಡ ಸಾಧ್ಯವಾಗುತಿಲ್ಲ ಎಂದು ಹೇಳಿದ್ದಾರೆ. ನನ್ನ ವಕೀಲರು ಆಂಟಿಗುವಾ ಮತ್ತು ಡೊಮಿನಿಕಾ ಎರಡು ಪ್ರಕರಣಗಳಲ್ಲಿ ಹೋರಾಡುತ್ತಿದ್ದಾರೆ. ಕೆಲವು ಸರ್ಕಾರಗಳು ನನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಯಾವ ಮಟ್ಟಕ್ಕೆ ಹೋಗಲು ಸಿದ್ಧವಾಗಿವೆ ಎಂಬುದು ಈಗಾಗಲೇ ಗೊತ್ತಾಗಿದೆ. ಆದರೆ, ಕಾಮನ್ ವೆಲ್ತ್ ರಾಷ್ಟ್ರಗಳ ಕಾನೂನು ವ್ಯವಸ್ಥೆಗಳಲ್ಲಿ ನಾನು ಸಂಪೂರ್ಣ ನಂಬಿಕೆ ಹೊಂದಿದ್ದೇನೆ ಮತ್ತು ನಾನು ವಿಜಯಶಾಲಿಯಾಗುತ್ತೇನೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ 13,500 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬೇಕಾಗಿದ್ದ ಚೋಕ್ಸಿ ಅವರು ಮೇ 23 ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಬಳಿಕ ಅವರು 2018 ರಿಂದ ಆಂಟಿಗುವಾ ನಾಗರಿಕರಾಗಿದ್ದಾರೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ:ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ತಡೆ ನೀಡಿದ ಡೊಮಿನಿಕಾ ಕೋರ್ಟ್