ನವದೆಹಲಿ: ದೇಶಾದ್ಯಂತ ಇಂಧನ ದರ ಏರಿಕೆಯಾಗುತ್ತಲೇ ಇದೆ. ಬಡವರ ಪಾಲಿಗೆ ದುನಿಯಾ ದುಬಾರಿಯಾಗುತ್ತಿದೆ. ಇಂದೂ ಸಹ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 105.84 ರೂಪಾಯಿ ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 94.57 ರೂಪಾಯಿ ಇದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.111.77ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.52ರೂ. ಗೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 109.53ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 100.37 ರೂ. ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 106.43ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 97.68ರೂ ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ಗೆ 103.02 ರೂ. ಇದ್ದು, ಲೀಟರ್ ಡೀಸೆಲ್ 98.94 ಕ್ಕೆ ಲಭ್ಯವಿದೆ.
ಕಳೆದ 23 ದಿನಗಳಲ್ಲಿ 19 ಬಾರಿ ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ್ದು, ಮುಂಬೈ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಸಹ ಡೀಸೆಲ್ ಬೆಲೆ ಸಹ ನೂರರ ಗಡಿ ದಾಟಿದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.