ಕರ್ನಾಟಕ

karnataka

ETV Bharat / bharat

ಪೆಟ್ರೋಲ್, ಡೀಸೆಲ್ ಬೆಲೆ ಯಾವುದೇ ಕಾರಣಕ್ಕೂ ಏರಿಕೆಯಿಲ್ಲ: ಕೇಂದ್ರ ಸಚಿವ ಜಾವಡೇಕರ್ - Javadekar on budget

ಕೃಷಿ ಸೆಸ್​ನಿಂದಾಗಿ ಸಾರ್ವಜನಿಕರ ಮೇಲೆ ಯಾವುದೇ ಹೊರೆ ಇರುವುದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟನೆ ನೀಡಿದ್ದಾರೆ.

Javadekar
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

By

Published : Feb 2, 2021, 10:08 AM IST

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಕೆಲವು ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹೇರಿದ ನಂತರ ಇಂಧನ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಯಾವುದೇ ಕಾರಣಕ್ಕೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ. ಜನರ ಮೇಲೆ ಹೆಚ್ಚುವರಿ ಹೊರೆ ಇರುವುದಿಲ್ಲ. ತೆರಿಗೆಗಳನ್ನು ಮರು ರೂಪಿಸುವ ಸಲುವಾಗಿ ಸೆಸ್ ವಿಧಿಸಲಾಗಿದೆ. ಸರ್ಕಾರವು ಸುಂಕ ಕಡಿಮೆ ಮಾಡದೆ ಮತ್ತು ಹೊಸ ಕೃಷಿ ಸೆಸ್ ಅನ್ನು ಪ್ರಾರಂಭಿಸಿದೆ ಎಂದು ಸಚಿವರು ಸ್ಪಷ್ಟೀಕರಿಸಿದ್ದಾರೆ.

ಇದನ್ನೂ ಓದಿ:ಮ್ಯಾನ್ಮಾರ್‌ ಮೇಲೆ ಕಠಿಣ ನಿರ್ಬಂಧದ ಎಚ್ಚರಿಕೆ ನೀಡಿದ ಅಮೆರಿಕ

ರಸ್ತೆಗಳು, ವಿದ್ಯುತ್, ನೀರು, ಬಂದರುಗಳು, ರೈಲ್ವೆ, ರಸ್ತೆಗಳು, ರನ್‌ವೇಗಳು ಮತ್ತು ಗ್ಯಾಸ್ ಪೈಪ್‌ಲೈನ್ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗೆ, ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಣೆಗಾಗಿ ಈ ಬಜೆಟ್ ರೂಪಿಸಲಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಪೆಟ್ರೋಲ್​​ ಮೇಲೆ 2 ರೂಪಾಯಿ 30 ಪೈಸೆ ಹಾಗೂ ಡೀಸೆಲ್​ ಮೇಲೆ 4 ರೂಪಾಯಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್​ ವಿಧಿಸಲಾಗಿದೆ ಎಂದು ಬಜೆಟ್​ನಲ್ಲಿ ಹೇಳಲಾಗಿತ್ತು. ಆದರೆ ಕಸ್ಟಂ ಸುಂಕವನ್ನು ಕಡಿಮೆ ಮಾಡುವುದಾಗಿ ಕೇಂದ್ರ ಪ್ರಸ್ತಾಪ ಮಾಡಿರುವುದರಿಂದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details