ಕರ್ನಾಟಕ

karnataka

ETV Bharat / bharat

ಪೆಟ್ರೋಲ್, ಡೀಸೆಲ್ ದರ: ನಿಮ್ಮ ನಗರದಲ್ಲಿ ಬೆಲೆ ಹೀಗಿದೆ.. - ಪೆಟ್ರೋಲ್ ಡೀಸೆಲ್ ದರ

ಪೆಟ್ರೋಲ್, ಡೀಸೆಲ್ ದರ ದೇಶಾದ್ಯಂತ ಸ್ಥಿರವಾಗಿದೆ. ದೇಶದ ಮಹಾನಗರಗಳು ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೈಲ ಬೆಲೆ ಹೀಗಿದೆ..

oil prices
ಪೆಟ್ರೋಲ್, ಡೀಸೆಲ್ ದರ: ನಿಮ್ಮ ನಗರದಲ್ಲಿ ಬೆಲೆ ಹೀಗಿದೆ..

By

Published : May 10, 2022, 10:25 AM IST

Updated : May 10, 2022, 11:44 AM IST

ಬೆಂಗಳೂರು: ಒಮ್ಮೆಲೆ ದಿಢೀರ್ ಏರಿಕೆಯಾಗಿ ಜನರಿಗೆ ಶಾಕ್ ನೀಡಿದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಇಂದು ಕೂಡಾ ತೈಲ ದರ ಸ್ಥಿರವಾಗಿದೆ. ಮಾರ್ಚ್ ತಿಂಗಳೊಂದರಲ್ಲೇ ತೈಲ ದರದಲ್ಲಿ 10 ರೂ. ಏರಿಕೆಯಾಗಿದ್ದು, ಸವಾರರಲ್ಲಿ ಆತಂಕ ಮೂಡಿಸಿತ್ತು.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.77ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.85 ರೂ. ಹಾಗೂ ಲೀಟರ್ ಡೀಸೆಲ್ ದರ 100.94 ರೂಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 115.12 ರೂ. ಡೀಸೆಲ್ ಬೆಲೆ ಲೀಟರ್​ಗೆ 99.83 ರೂ. ಆಗಿದೆ.

ನಾಲ್ಕು ಮೆಟ್ರೋ ನಗರಗಳಲ್ಲಿ ಮುಂಬೈನಲ್ಲಿ ಇಂಧನ ಬೆಲೆಗಳು ಅತ್ಯಧಿಕವಾಗಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾರಣದಿಂದಾಗಿ ರಾಜ್ಯಗಳಲ್ಲಿ ತೈಲ ಬೆಲೆ ಏರಿಳಿತವಾಗಿರುತ್ತದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳ ನಂತರ ತೈಲ ಬೆಲೆ ಏರಿಕೆ ಕಂಡಿದ್ದು, ಅದಾದ ನಂತರ ದರಗಳಲ್ಲಿ ಸ್ಥಿರತೆ ಕಂಡುಬಂದಿದೆ.

ರಾಜ್ಯದ ಹಲವು ನಗರಗಳಲ್ಲಿ ತೈಲ ದರ (ಒಂದು ಲೀಟರ್​ಗೆ.. ರೂಪಾಯಿಗಳಲ್ಲಿ)

ನಗರ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ
ಬೆಂಗಳೂರು 111.11 94.81
ಮಂಗಳೂರು 110.81 94.50
ಮೈಸೂರು 110.59 94.34
ಹುಬ್ಬಳ್ಳಿ 110.81 94.56
ಶಿವಮೊಗ್ಗ 112.54 96.02

ಇದನ್ನೂ ಓದಿ:ಒಂದೇ ದಿನ ಡಾಲರ್​ ಎದುರು 60 ಪೈಸೆ ಕುಸಿತ ಕಂಡ ರೂಪಾಯಿ: ದಾಖಲೆ ಇಳಿಕೆ

Last Updated : May 10, 2022, 11:44 AM IST

ABOUT THE AUTHOR

...view details