ಇಲ್ಲಿ ಮಾತ್ರ ಇಂಧನ ಭಾರಿ ದುಬಾರಿ: ಪೆಟ್ರೋಲ್ ಬೆಲೆ ಲೀಟರ್‌ಗೆ 113 ರೂ..! - ಇಂಧನ ಬೆಲೆ ಏರಿಕೆ
ಬೇರೆ ರಾಜ್ಯಗಳಿಗಿಂತ ಮಧ್ಯಪ್ರದೇಶದಲ್ಲಿ ಇಂಧನ ಬೆಲೆ ಏರಿಕೆ ಇನ್ನೂ ಹೆಚ್ಚಿದೆ. ಅನೂಪ್ಪುರದಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 113.10 ಆಗಿದ್ದರೆ, ಡೀಸೆಲ್ ಲೀಟರ್‌ಗೆ 101.35 ರೂ. ಇದೆ.
ಪೆಟ್ರೋಲ್ ಬೆಲೆ ಲೀಟರ್‌ಗೆ 113 ರೂ..!
By
Published : Jul 17, 2021, 1:00 PM IST
ಭೂಪಾಲ್:ಮಧ್ಯಪ್ರದೇಶದಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ, ಶನಿವಾರ, ಭೋಪಾಲ್‌ನಲ್ಲಿ ಪೆಟ್ರೋಲ್ ಲೀಟರ್‌ಗೆ 110.27 ರೂ.ಗೆ ಮಾರಾಟವಾಗುತ್ತಿದೆ. ಆದರೆ, ಅನೂಪ್ಪುರದಲ್ಲಿ ಮಾತ್ರ ಇಂಧನ ಬೆಲೆ ಇನ್ನೂ ಹೆಚ್ಚಿದ್ದು, ಅನೂಪ್ಪುರದಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 113.10 ಆಗಿದ್ದರೆ, ಡೀಸೆಲ್ ಲೀಟರ್‌ಗೆ 101.35 ರೂ. ಇದೆ. ದೇಶದ ಯಾವುದೇ ಭಾಗದಲ್ಲೂ ಇಷ್ಟೊಂದು ದುಬಾರಿ ಬೆಲೆಗೆ ಇಂಧನ ಮಾರಾಟವಾಗ್ತಿಲ್ಲ.
ಕಾರಣವೇನು:
ರಾಜ್ಯದಲ್ಲಿ ಪೆಟ್ರೋಲ್‌ಗೆ ಶೇ.33 ತೆರಿಗೆ ವಿಧಿಸಲಾಗುತ್ತದೆ, ಈ ತೆರಿಗೆಗೆ ಮತ್ತೆ ಸೆಸ್ ವಿಧಿಸಲಾಗುತ್ತದೆ. ಪ್ರಸ್ತುತ, ಮಧ್ಯಪ್ರದೇಶದಲ್ಲಿ ಪೆಟ್ರೋಲ್‌ಗೆ 4.50 ರೂ ಮತ್ತು ಡೀಸೆಲ್ ಮೇಲೆ ಶೇ. 23 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 3 ರೂ. ರಾಜ್ಯ ಸರ್ಕಾರದ ತೆರಿಗೆ ಮತ್ತು ಸೆಸ್ ನಂತರ, ಉಳಿದ ವೆಚ್ಚವನ್ನು ಮಹಾನಗರ ಪಾಲಿಕೆ ಪೂರೈಸುತ್ತದೆ.
ಇದರಲ್ಲಿ ಭೋಪಾಲ್ ಸೇರಿದಂತೆ ಕೆಲವು ಪುರಸಭೆ ಸಂಸ್ಥೆಗಳು ಪೆಟ್ರೋಲ್ ಮೇಲೆ ಪ್ರತ್ಯೇಕ ಸೆಸ್ ವಿಧಿಸುತ್ತವೆ. ಇದರ ಪರಿಣಾಮವಾಗಿ, ನಗರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗಲು ಕಾರಣವಾಗಿದೆ.
ತೈಲ ಬೆಲೆ ಏರಿಕೆ ಸಂಬಂಧ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದೇಶಿ ತುಪ್ಪಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ:
ಭೋಪಾಲ್‌ನಲ್ಲಿ ಶನಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 110.27 ರೂ.ಗಳಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 98.72 ರೂ.ಗೆ ಏರಿದೆ. ಇಂದೋರ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.05 ರೂ., ಡೀಸೆಲ್ ಲೀಟರ್‌ಗೆ 98.83 ರೂ.
ಅಲ್ಲದೆ, ರಾಜ್ಯದ ಜಬಲ್ಪುರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.06 ರೂ., ಡೀಸೆಲ್ ಬೆಲೆ ಲೀಟರ್‌ಗೆ 98.56 ರೂ. ಅದೇ ರೀತಿ ಗ್ವಾಲಿಯರ್‌ನಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಬೆಲೆ ಏರಿಕೆ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ:
ದೇಶದ 250 ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಗಳನ್ನು ದಾಟಿದೆ ಎಂಬುದು ಊಹಿಸಲಸಾಧ್ಯ, ಈ ಒಂದೇ ವರ್ಷದಲ್ಲಿ ಇದುವರೆಗೆ ಸರ್ಕಾರ ಒಟ್ಟು 66 ಬಾರಿ ಇಂಧನ ಬೆಲೆ ಹೆಚ್ಚಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಚಿನ್ ಪೈಲಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 250 ಮತ್ತು ಡೀಸೆಲ್ ಮೇಲೆ ಶೇ 800 ಹೆಚ್ಚಾಗಿದೆ, ಇದರಿಂದಾಗಿ ಅವರಿಗೆ 25 ಲಕ್ಷ ಕೋಟಿ ರೂ. ಆದಾಯ ಹೆಚ್ಚಿಸಿದೆ. ಇದು ಸಾಮಾನ್ಯ ಜನರ ಜೇಬು ಖಾಲಿ ಮಾಡ್ತಿದೆ ಎಂದು ದೂರಿದ್ದಾರೆ.