ಇಂದೋರ್:ದೇಶಾದ್ಯಂತ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 80 ರಿಂದ 85ರೂ.ಯ ಒಳಗಿದೆ. ಆದರೆ ಮಧ್ಯಪ್ರದೇಶದ ಇಂದೋರ್ನಲ್ಲಿ ಮಾತ್ರ ಪ್ರತಿ ಲೀಟರ್ಗೆ 92.10 ರೂ.ಯಲ್ಲಿ ಮಾರಾಟವಾಗುತ್ತಿದೆ.
ಸರ್ಕಾರದ ಸ್ವಾಮ್ಯದ ಚಿಲ್ಲರೆ ಇಂಧನ ವ್ಯಾಪಾರಿಗಳು ಸತತ ಎರಡನೇ ದಿನ ಕೂಡ ದರ ಏರಿಸಿದ್ದರಿಂದ ಈ ಬೆಳವಣಿಗೆ ಕಂಡು ಬಂದಿದೆ. ಹಾಗಾಗಿ ಬೆಲೆ ಸಾರ್ವಕಾಲಿಕ ಗರಿಷ್ಠ 94.10ರೂ. ತಲುಪಿದೆ. ಇದರ ಜತೆಗೆ ಡೀಸೆಲ್ ಬೆಲೆ 82.62 ರೂ ತಲುಪಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಶೇ.33ರಷ್ಟು ಮೌಲ್ಯವರ್ಧಿತ ತೆರಿಗೆ ಹಾಗೂ 4.50 ರೂ.ಗಳ ಇತರ ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಪೆಟ್ರೋಲ್ ಪಂಪ್ ನೌಕರರು ತಿಳಿಸಿದ್ದಾರೆ.
ಕೊರೊನಾ ವೈರಸ್ ಮಧ್ಯೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮಧ್ಯಪ್ರದೇಶ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್ಗೆ ಪ್ರತಿ ಲೀಟರ್ಗೆ 13 ರೂ. ಮತ್ತು ಡಿಸೇಲ್ ಮೇಲೆ 15 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದೆ.