ಸಂಗಾರೆಡ್ಡಿ(ತೆಲಂಗಾಣ):ಗೆಳೆತನಕ್ಕೆ ನಿಜವಾದ ಅರ್ಥ ಈ ಮಕ್ಕಳಲ್ಲಿದೆ. ತನ್ನ ಗೆಳೆಯನೊಬ್ಬ ಅಂಗವಿಕಲನಾಗಿದ್ದಾನೆ ಎಂದು ತಿಳಿದ ಗೆಳೆಯರು ಅವನಿಗೆ ಕೈ-ಕಾಲುಗಳಾಗಿದ್ದಾರೆ. ಊಟ ಮಾಡಿಸುವುದು, ಜೊತೆಗೂಡಿ ಆಟವಾಡುವುದು, ಊರು ಸುತ್ತುವುದು, ಗಲಾಟೆ ಮಾಡುವುದು, ಶಾಲೆಗೆ ಹೋಗುವುದು, ಓದುವುದು ಹೀಗೆ ಆ ಗೆಳೆಯನಿಗೆ ಅಂಗವೈಕ್ಯಲತೆಯ ಕೊರಗು ಬಾರದಂತೆ ಆ ಗೆಳೆಯರು ನೋಡಿಕೊಳ್ಳುತ್ತಿದ್ದಾರೆ. ಇದು ಒಂದಲ್ಲ.. ಎರಡಲ್ಲ.. ಹಲವು ವರ್ಷಗಳಿಂದ ಇದೇ ರೀತಿ ಸಾಗಿರುವುದು ಗಮನಾರ್ಹ...
Friendship day Special: ಕೊಂಕೋಲ್ ಗ್ರಾಮದ ನಿವಾಸಿ ಮಧು ಕುಮಾರ್ 5ನೇ ತರಗತಿಯಲ್ಲಿ ಓದುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿತ್ತು. ಈ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಮಧುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿದ್ಯುತ್ ಅವಘಡದಿಂದಾಗಿ ಆತನ ಕಾಲುಗಳು ಮತ್ತು ಕೈಗಳನ್ನು ದೇಹದಿಂದ ತೆಗೆದು ಹಾಕಲಾಯಿತು. ಹಲವು ದಿನಗಳಿಂದ ಮಧು ಆಸ್ಪತ್ರೆಯ ಬೆಡ್‌ಗೆ ಸೀಮಿತರಾಗಿದ್ದರು.
ಆ ನಂತರ ಚೇತರಿಸಿಕೊಂಡು ಶಾಲೆಗೆ ಹೋಗುವ ಹಂಬಲವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದರು. ಆದರೆ ಕೊರೊನಾ ಪ್ರಭಾವದಿಂದ ಶಾಲೆಗೆ ಹೋಗಲು ಆಗಿರಲಿಲ್ಲ. ಈಗ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಮಧು ನಿತ್ಯ ಶಾಲೆಗೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಆತನ ಗೆಳೆಯರು ಮತ್ತು ಶಿಕ್ಷಕರು..
ಇತ್ತೀಚೆಗೆ ಅಶೋಕ್ ಎಂಬ ಶಿಕ್ಷಕ ಮಕ್ಕಳನ್ನು ತರಗತಿಯಲ್ಲಿ ಆಟವಾಡಿಸುತ್ತಿದ್ದರು. ಎಲ್ಲ ಮಕ್ಕಳೂ ಆಟದಲ್ಲಿ ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಶಿಕ್ಷಕ ಮತ್ತು ಸಹ ವಿದ್ಯಾರ್ಥಿಗಳು ಮಧು ಕಣ್ಣುಗಳಲ್ಲಿ ಸ್ವಲ್ಪ ನೋವು ಗಮನಿಸಿದರು. ತಕ್ಷಣ ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಮಧುಗೆ ಕೈಕಾಲುಗಳಾಗಿ ಆಟವಾಡಿಸಿದರು. ಆಗ ಮಧು ಕಣ್ಣಲ್ಲಿ ಮಂದಾಹಾಸ ಮೂಡಿತು.
ಮಧುಕುಮಾರ್ ಶಾಲೆಗೆ ಬರುವಾಗಿನಿಂದ ಆತನ ಸ್ನೇಹಿತರು ಜೋತೆಯಲ್ಲೇ ಇರುತ್ತಾರೆ. ಮಧುಗೆ ಅನ್ನ ತಿನ್ನಿಸುವುದು, ನೀರು ಕುಡಿಸುವುದು, ಹೊರಗೆ ಕರೆದುಕೊಂಡು ಹೋಗುವುದು, ಆಟ ಆಡಿಸುವುದು... ಹೀಗೆ ಗೆಳೆಯನ ಎಲ್ಲ ಜವಾಬ್ದಾರಿಯನ್ನು ಸಂಪೂರ್ಣವಾಗಿ ಗೆಳೆಯರೇ ನೋಡಿಕೊಳ್ಳುತ್ತಾರೆ. ಈ ನೋವಿನಲ್ಲೂ ಮಧುವಿನ ಕಣ್ಣುಗಳು ಆನಂದದಿಂದ ಹೊಳೆಯುವುದಕ್ಕೆ ಕಾರಣ ಆತನ ಈ ಗೆಳೆಯರೇ..
ಮಧುಕುಮಾರ್ಗೆ ಕೈಕಾಲುಗಳಾದ ಗೆಳೆಯರು: ಸಂಗಾರೆಡ್ಡಿ ಜಿಲ್ಲೆಯ ಕೊಂಕೋಲ್ ಗ್ರಾಮದ ಮಧು ಕುಮಾರ್ ಅವನು ತನ್ನ ಸಹವರ್ತಿ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆಯುವುದು, ನಮಸ್ಕರಿಸುವುದು, ಹಸ್ತ ಲಾಗವ ಮಾಡುವುದು ಈ ವಿಡಿಯೋದಲ್ಲಿ ನೋಡಬಹದು. ಆದರೆ ಇದಕ್ಕೆ ಕಾರಣ ಅವರ ಗೆಳೆಯರು.