24 ಪರಗಣ ( ಪಶ್ಚಿಮ ಬಂಗಾಳ) : ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧ ಬಲಪಡಿಸಲು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಮುಜೀಬ್ ಉರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಬಿಎಸ್ಎಫ್ನ ದಕ್ಷಿಣ ಬಂಗಾಳ ಗಡಿನಾಡು "ಸ್ನೇಹ ಸೈಕಲ್ ರ‍್ಯಾಲಿ" ಹಮ್ಮಿಕೊಳ್ಳಲಾಗಿದೆ.
ಸೈಕಲ್ ರ‍್ಯಾಲಿಯನ್ನು ನಿವೃತ್ತ ಜನರಲ್ ಶಂಕರ್ ರಾಯ್ ಚೌಧರಿ ಹಾಗೂ ಹಿರಿಯ ಬಿಎಸ್ಎಫ್ ಅಧಿಕಾರಿಗಳು ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಹಿರಿಯ ಅಧಿಕಾರಿಗಳು ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. 24 ಪರಗಣ ಜಿಲ್ಲೆಯ ಗಟಿ ಭಾಗದಿಂದ ಸೈಕಲ್ ರ‍್ಯಾಲಿ ಪ್ರಾರಂಭವಾಗಿದ್ದು, ಇದು 66 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ರ‍್ಯಾಲಿಯಲ್ಲಿ, ಗಡಿ ಭದ್ರತಾ ಪಡೆಯ 13 ಸಿಬ್ಬಂದಿ 4,097 ಕಿ.ಮೀ ದೂರವನ್ನು ಕ್ರಮಿಸಲಿದ್ದಾರೆ.