ಕರ್ನಾಟಕ

karnataka

ETV Bharat / bharat

ಹೊಸ ಜೋಡಿಗೆ ಮದುವೆ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್-ಡೀಸೆಲ್! - ಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನವ ಜೋಡಿಗೆ ಪೆಟ್ರೋಲ್ ಹಾಗೂ ಡೀಸೆಲ್ ಗಿಫ್ಟ್​ ನೀಡಿದ್ದಾರೆ. ತಲಾ ಒಂದು ಲೀಟರ್​ ಬಾಟಲಿಯಲ್ಲಿ ತೈಲವನ್ನು ತುಂಬಿ ಸ್ನೇಹಿತರು ಉಡುಗೊರೆಯಾಗಿ ಕೊಟ್ಟಿದ್ದಾರೆ..

ಹೊಸ ಜೋಡಿಗೆ ಮದುವೆ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್-ಡೀಸೆಲ್
ಹೊಸ ಜೋಡಿಗೆ ಮದುವೆ ಉಡುಗೊರೆಯಾಗಿ ಸಿಕ್ತು ಪೆಟ್ರೋಲ್-ಡೀಸೆಲ್

By

Published : Apr 8, 2022, 12:15 PM IST

ಚೆನ್ನೈ(ತಮಿಳುನಾಡು) :ಹೊಸದಾಗಿ ಮದುವೆಯಾದ ಜೋಡಿಗೆ ಸಂಬಂಧಿಕರು ಮತ್ತು ಸ್ನೇಹಿತರು ಗೃಹ ಬಳಕೆಗೆ ಬೇಕಾದ ತರಹೇವಾರಿ ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿಗೆ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ತುಂಬಿದ ಬಾಟಲಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನವ ಜೋಡಿಗೆ ಪೆಟ್ರೋಲ್ ಹಾಗೂ ಡೀಸೆಲ್ ಗಿಫ್ಟ್​ ನೀಡಿದ್ದಾರೆ. ತಲಾ ಒಂದು ಲೀಟರ್​ ಬಾಟಲಿಯಲ್ಲಿ ತೈಲವನ್ನು ತುಂಬಿ ಸ್ನೇಹಿತರು ಉಡುಗೊರೆಯಾಗಿ ಕೊಟ್ಟಿದ್ದಾರೆ.

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ನಡುವೆ ಹೊಸ ದಂಪತಿಗೆ ಗಿಫ್ಟ್​ ಆಗಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇನ್ನು, ತಮಿಳುನಾಡಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ಬೆಲೆ 110.85 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 100.94 ರೂ. ಇದೆ.

ಇದನ್ನೂ ಓದಿ:ಪತಿ ಮೃತಪಟ್ಟ 11 ತಿಂಗಳ ನಂತರ ಮಗು ಪಡೆದ ಮಹಿಳೆ.. ಅದ್ಹೇಗಿ ಅಂದ್ರೇ ಹೀಗೆ..

ABOUT THE AUTHOR

...view details