ಕರ್ನಾಟಕ

karnataka

ETV Bharat / bharat

ಕೇವಲ ಎರಡು ಸಾವಿರಕ್ಕೆ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ! - ಸ್ನೇಹಿತನ ಕೊಲೆ

ಹೈದರಾಬಾದ್​ನ (Telangana capital Hyderabad) ಮುಶೀರಾಬಾದ್ ಪೊಲೀಸ್ ಠಾಣೆ (Musheerabad police station) ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ಹಣದ ವಿಚಾರವಾಗಿ (Money issue) ಜಗಳವಾಡಿದ ಸೋನಾ ಎಂಬ ಯುವಕ ಅಲ್ತಾಫ್ ಖಾನ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ (Friend Murder).

Telangana capital Hyderabad, Musheerabad police station, Money issue, murder for 2000 rupees, Friend Murder, ತೆಲಂಗಾಣ ರಾಜಧಾನಿ ಹೈದರಾಬಾದ್, ಮುಶೀರಾಬಾದ್ ಪೊಲೀಸ್ ಠಾಣೆ, ಹಣದ ವಿಚಾರ, ಸ್ನೇಹಿತನ ಕೊಲೆ,
ಮುಶೀರಾಬಾದ್ ಪೊಲೀಸ್ ಠಾಣೆ

By

Published : Nov 12, 2021, 9:25 AM IST

ಹೈದರಾಬಾದ್:ಮುಶೀರಾಬಾದ್ ಪೊಲೀಸ್ ಠಾಣೆಯಲ್ಲಿ (Musheerabad police station) 2,000 ರೂ.ಗಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನನ್ನು ಬರ್ಬರವಾಗಿ ಕೊಂದಿದ್ದಾನೆ (murder for 2000 rupees). ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ವಾರಾಣಸಿ ಮೂಲದ ಸೋನು (27) ಆರು ವರ್ಷಗಳ ಹಿಂದೆ ಜೀವನ ನಡೆಸಲು ಮುಶೀರಾಬಾದ್​ಗೆ ಬಂದು ನೆಲೆಸಿದ್ದರು.

ಸೋನುಗೆ ಆ ಪ್ರದೇಶದ ಮಟನ್ ಅಂಗಡಿಯಲ್ಲಿ ಕೆಲಸ ಮಾಡುವ ಅಲ್ತಾಫ್ ಖಾನ್ ಜೊತೆ ಪರಿಚಯವಾಯಿತು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಇಬ್ಬರೂ ಮುಶೀರಾಬಾದ್‌ನಲ್ಲಿ (Musheerabad) ಬಾಡಿಗೆ ಕೊಠಡಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಅಲ್ತಾಫ್ ಖಾನ್ ಸೋನುಗೆ 2000 ರೂ. ಹಣ ನೀಡಿದ್ದನು. ಅದನ್ನು ವಾಪಸ್ ನೀಡುವಂತೆ ಸೋನುಗೆ ಅಲ್ತಾಫ್ ಕೇಳುತ್ತಲೇ ಬಂದಿದ್ದಾನೆ. ಸೋನು ನೀಡುವುದಾಗಿ ಹೇಳುತ್ತಲೇ ಬಂದಿದ್ದಾನೆ. ಗುರುವಾರ ರಾತ್ರಿ ಸೋನು ಮತ್ತು ಅಲ್ತಾಫ್ ಇಬ್ಬರೂ ತಮ್ಮ ರೂಮಿನಲ್ಲಿ ಮದ್ಯ ಸೇವಿಸಿದ್ದಾರೆ.

ಆ ವೇಳೆ ಹಣದ ವಿಚಾರವಾಗಿ (Money issue) ಇಬ್ಬರ ನಡುವೆ ಜಗಳ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಅಲ್ತಾಫ್, ಸೋನುಗೆ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಕೊಲೆ (Murder) ಮಾಡಿದ್ದಾನೆ (a man murder his room mate). ನಂತರ ಅಲ್ತಾಫ್ ಖಾನ್ ಮುಶೀರಾಬಾದ್ ಪೊಲೀಸ್ ಠಾಣೆಗೆ (Musheerabad police station) ತೆರಳಿ ಶರಣಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ (Post mortem examination) ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಮುಶಿರಾಬಾದ್​ ಪೊಲೀಸ್​ ಠಾಣೆಯಲ್ಲಿ (Musheerabad police station) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details