ಕರ್ನಾಟಕ

karnataka

ETV Bharat / bharat

ಕುಡಿದ ಮತ್ತಿನಲ್ಲಿ ಜಗಳ.. ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿದ ಯುವಕ! - ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿದ ವ್ಯಕ್ತಿ

Young man cuts his friend genital in UP: ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡ ಯುವಕನೋರ್ವ ತನ್ನ ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

friend cut genitals of friend
friend cut genitals of friend

By

Published : Dec 30, 2021, 8:43 PM IST

ಬಹ್ರೈಚ್​​(ಉತ್ತರ ಪ್ರದೇಶ): ರಕ್ತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಶ್ರೇಷ್ಠ ಎಂಬ ಮಾತಿದೆ. ಆದರೆ, ಸ್ನೇಹಿತರ ಸಂಬಂಧಕ್ಕೆ ಮುಜುಗರ ತರುವಂತಹ ಪ್ರಕರಣವೊಂದು ಉತ್ತರ ಪ್ರದೇಶದ ಬಹ್ರೈಚ್​​ನಲ್ಲಿ ನಡೆದಿದೆ. ಇಲ್ಲಿನ ಜರ್ವಾಲ್​ ಪ್ರದೇಶದಲ್ಲಿ ಸ್ನೇಹಿತರಿಬ್ಬರು ಸೇರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದು, ಈ ವೇಳೆ ಜಗಳ ಮಾಡಿಕೊಂಡಿದ್ದಾರೆ. ಜಗಳ ತಾರಕ್ಕೇರಿದಾಗ ಯುವಕನೋರ್ವ ಆತನ ಸ್ನೇಹಿತನ ಮರ್ಮಾಂಗ ಕತ್ತರಿಸಿದ್ದಾನೆ.

ಸ್ನೇಹಿತನ ಮರ್ಮಾಂಗ ಕತ್ತರಿಸಿದ ಯುವಕ

ಕುಡಿದ ನಶೆಯಲ್ಲಿ ಸ್ನೇಹಿತನ ಮರ್ಮಾಂಗ ಕತ್ತರಿಸಿರುವ ವ್ಯಕ್ತಿ ಆತನನ್ನ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ತೆರಳಿರುವ ಪೊಲೀಸರು ಗಾಯಗೊಂಡ ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ನಯೀಮ್​ ಅಹ್ಮದ್​(30) ತನ್ನ ಸ್ನೇಹಿತ ಸುಲೇಮಾನ್​ ಜೊತೆ ಸೇರಿ ಕೆಲಸದ ನಿಮಿತ್ತ ಜರ್ವಾಲ್​​ಗೆ ಬಂದಿದ್ದರು. ಇಬ್ಬರು ಕಂಠಪೂರ್ತಿ ಕುಡಿದಿದ್ದು, ಜಗಳವಾಡಿಕೊಂಡಿದ್ದಾರೆ. ಈ ವೇಳೆ ಸುಲೇಮಾನ್​​ ಬ್ಲೇಡ್​​ನಿಂದ ನಯೀಮ್​ ಅಹ್ಮದ್​​ ಮರ್ಮಾಂಗ ಕತ್ತರಿಸಿ ಪರಾರಿಯಾಗಿದ್ದಾನೆ.

ಇದನ್ನೂ ಓದಿರಿ:ತಿನ್ನಲು ಸೊಪ್ಪಲ್ಲ.. ಪ್ರತಿದಿನ ಈ ಮೇಕೆಗೆ ಬೇಕೇ ಬೇಕು ಚಿಕನ್​, ಮಟನ್​​ ಬಿರಿಯಾನಿ!

ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ನಯೀಮ್​ನನ್ನು ನೋಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಆತನನ್ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಆತನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಸುಲೇಮಾನ್​ಅನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details