ಕರ್ನಾಟಕ

karnataka

ETV Bharat / bharat

ಕರ್ತವ್ಯ ಪಥ್​, ನೇತಾಜಿ ಪ್ರತಿಮೆ ನಾಳೆ ಉದ್ಘಾಟನೆ.. ಕಂಗೊಳಿಸುತ್ತಿರುವ ಸೆಂಟ್ರಲ್ ವಿಸ್ತಾ - ನೇತಾಜಿ ಪ್ರತಿಮೆ ಅನಾವರಣ

ನವೀಕರಿಸಲಾದ ಸೆಂಟ್ರಲ್​ ವಿಸ್ತಾವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಅದರ ವಿಹಂಗಮ ನೋಟದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್​ ಚಂದ್ರ ಬೋಸ್​, ಕರ್ತವ್ಯ ಪಥವನ್ನು ಉದ್ಘಾಟನೆ ಮಾಡಲಿದ್ದಾರೆ.

fresh-video-of-revamped-central-vista
ಕಂಗೊಳಿಸುತ್ತಿರುವ ಸೆಂಟ್ರಲ್ ವಿಸ್ತಾ

By

Published : Sep 7, 2022, 7:38 PM IST

ನವದೆಹಲಿ:ವಿಜಯ್​ ಚೌಕ್​ನಿಂದ ಇಂಡಿಯಾ ಗೇಟ್​ವರೆಗೆ ನವೀಕರಿಸಲಾದ ಸೆಂಟ್ರಲ್​ ವಿಸ್ತಾ, ಇಂಡಿಯಾ ಗೇಟ್​ನಲ್ಲಿ ನಿರ್ಮಿಸಲಾದ ನೇತಾಜಿ ಸುಭಾಷ್​ಚಂದ್ರ ಬೋಸ್​ ಪ್ರತಿಮೆ ಮತ್ತು ಕರ್ತವ್ಯಪಥವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಸೆ.8 ರಂದು) ಉದ್ಘಾಟಿಸಲಿದ್ದಾರೆ.

ಕಂಗೊಳಿಸುತ್ತಿರುವ ಸೆಂಟ್ರಲ್ ವಿಸ್ತಾ

ವಿಸ್ತರಿಸಲಾದ ಸೆಂಟ್ರಲ್​ ವಿಸ್ತಾದ ಕಾಮಗಾರಿಯ ವಿಡಿಯೋವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ. ಡ್ರೋನ್​ ಮೂಲಕ ನವೀಕೃತ ವಿಸ್ತಾ ಅವೆನ್ಯೂ ಪ್ರದೇಶದ ವಿಹಂಗಮ ನೋಟವನ್ನು ಸೆರೆ ಹಿಡಿಯಲಾಗಿದೆ. ವಿಶಾಲವಾದ ಹಸಿರು ಮತ್ತು ಆಧುನಿಕತೆಯನ್ನು ಒಳಗೊಂಡ ಸೆಂಟ್ರಲ್​ ವಿಸ್ತಾ ಜನರ ಬಳಕೆಗೆ ಸಿದ್ಧವಾಗಿದೆ.

ನೂತನ ಸೆಂಟ್ರಲ್​ ವಿಸ್ತಾ

ರಾಜ್ಯವಾರು ಆಹಾರದ ಮಳಿಗೆಗಳು, ಕೆಂಪು ಗ್ರಾನೈಟ್​​​, ಪಾದಚಾರಿ ಮಾರ್ಗಗಳು, ಹಸಿರು ಉದ್ಯಾನವನಗಳು ಸೆಂಟ್ರಲ್​ ವಿಸ್ತಾದ ಪ್ರಮುಖ ಆಕರ್ಷಣೆಗಳಾಗಿವೆ. ಇವೆಲ್ಲವೂ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ವ್ಯಾಪಿಸಿವೆ.

ಸೆಂಟ್ರಲ್ ವಿಸ್ತಾದ ನವೀಕೃತ ಪ್ರದೇಶ

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ವಿಸ್ತರಿಸಿರುವ ಸೆಂಟ್ರಲ್ ವಿಸ್ತಾ ದೆಹಲಿಯಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆ ಆಕರ್ಷಣೀಯ ಕಾರ್ಯಕ್ರಮವಾಗಿದೆ.

ಸೆಂಟ್ರಲ್ ವಿಸ್ತಾದ ನವೀಕೃತ ಪ್ರದೇಶ

ನೇತಾಜಿ ಪ್ರತಿಮೆ ಅನಾವರಣ:ಇಂಡಿಯಾ ಗೇಟ್​ ಬ್ರಿಟಿಷ್​ ಕಾಲದಲ್ಲಿ ನಿರ್ಮಿಸಲಾಗಿದ್ದ ಜಾರ್ಜ್​ ದೊರೆಯ ಪುತ್ಥಳಿಯ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅದನ್ನು ನಾಳೆ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಹಿಂದೆ ಇದ್ದ ಜಾರ್ಜ್​ ದೊರೆಯ ಪುತ್ಥಳಿ ವಸಾಹತುಶಾಹಿಯನ್ನು ಪ್ರತಿನಿಧಿಸುತ್ತಿದ್ದ ಕಾರಣ ಆ ಜಾಗದಲ್ಲಿ ಸ್ವಾತಂತ್ರ್ಯ ವೀರನ ಪುತ್ಥಳಿ ನಿರ್ಮಿಸಲಾಗಿದೆ.

ಪಾದಚಾರಿ ಮಾರ್ಗಗಳು

ಸೆಂಟ್ರಲ್ ವಿಸ್ಟಾ ಅವೆನ್ಯೂ 3 ಕಿ.ಮೀ ಉದ್ದವಿದೆ. ಇದು ಇಂಡಿಯಾ ಗೇಟ್​ನ ಉತ್ತರದಿಂದ ದಕ್ಷಿಣ ಬ್ಲಾಕ್​ವರೆಗೆ ಹರಡಿದೆ. ಇದು ರಾಜಪಥಕ್ಕೆ(ಕರ್ತವ್ಯ್​ ಪಥ್​) ತಾಕಿಕೊಂಡಿರುವ ಲಾನ್​ಗಳು, ಅಂಡರ್​ಪಾಸ್, ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಪ್ಲಾಜಾವನ್ನೂ ಒಳಗೊಂಡಿದೆ.

ಓದಿ:ಅನಂತನಾಗ್​ನಲ್ಲಿ ಆಕಸ್ಮಿಕ ಎನ್​​ಕೌಂಟರ್​.. ಇಬ್ಬರು ಉಗ್ರರು ಮಟಾಷ್​​

ABOUT THE AUTHOR

...view details